ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಸಚಿವರೆಲ್ಲರೂ ಭ್ರಷ್ಟರು: ಆರೋಪ

ಭಾಷಣದುದ್ದಕ್ಕೂ ಬಸವಣ್ಣನ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ: ಹರಿದು ಬಂದ ಜನಸಾಗರ
Last Updated 9 ಮೇ 2018, 13:35 IST
ಅಕ್ಷರ ಗಾತ್ರ

ವಿಜಯಪುರ: ‘ಭ್ರಷ್ಟಾಚಾರ ಆಪಾದನೆ ಇಲ್ಲದ ಒಬ್ಬರೇ ಒಬ್ಬರು ಸಚಿವರು ಕರ್ನಾಟಕ ಸರ್ಕಾರದಲ್ಲಿ ಇಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ವಿಜಯಪುರ ತಾಲ್ಲೂಕಿನ ಸಾರವಾಡ ಗ್ರಾಮದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾತನಾಡಿದ ಅವರು, ನೀರಾವರಿ ಸಚಿವರು ಗುತ್ತಿಗೆದಾರರೊಂದಿಗೆ ಶಾಮೀಲಾ ಗಿದ್ದಾರೆ. ಪರಿಣಾಮ ಗುತ್ತಿಗೆದಾರರು ಹೆಲಿಕಾಪ್ಟರ್‌ನಲ್ಲಿ ತಿರುಗಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ದಾಸಿಮಯ್ಯ ಅವರ ಬಗ್ಗೆ ಮುಖ್ಯಮಂತ್ರಿಗಾಗಲೀ, ಹೈಕಮಾಂಡ್‌ಗಾಗಲೀ ಗೊತ್ತಿಲ್ಲ. ಆದರೆ, ನೀರಾವರಿ, ಉನ್ನತ ಶಿಕ್ಷಣ ಹಾಗೂ ಗಣಿ ಸಚಿವರು ಇವರ ಅನುಯಾಯಿಗಳೆಂದು ಹೇಳಿಕೊಂಡು ರಾಜಕೀಯ ಲಾಭಕ್ಕಾಗಿ ಸಮಾಜ ಒಡೆಯಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಕೇಂದ್ರದಲ್ಲಿ 50 ವರ್ಷ ಅಧಿಕಾರ ಆಡಳಿತದಲ್ಲಿತ್ತು. ಸಂಸತ್ತಿನಲ್ಲಿ ಭಗವಾನ ಬಸವಣ್ಣನ ಮೂರ್ತಿ ಪ್ರತಿಷ್ಠಾಪಿಸುವ ವಿಚಾರ ಬರಲಿಲ್ಲ. ವಾಜಪೇಯಿ ಅವರು ಮೂರ್ತಿ ಪ್ರತಿಷ್ಠಾಪಿಸಿದರು. ಬಸವಣ್ಣನವರ ಪ್ರಜಾಪ್ರಭುತ್ವ ಹಾಗೂ ಮಹಿಳಾ ಸಮಾನತೆಯನ್ನು ವಿಶ್ವಕ್ಕೆ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

2015ರಲ್ಲಿ ಲಂಡನ್‌ನಲ್ಲಿ ಬಸವಣ್ಣನವರ ಮೂರ್ತಿ ಉದ್ಘಾಟನೆಗೆ ಹೋಗಿದ್ದೆ. ಶರಣರು, ಮಠಗಳು ಕರ್ನಾಟಕದ ಶಕ್ತಿಯಾಗಿವೆ. ಬಸವಣ್ಣನ ತ್ರಿವಿಧ ದಾಸೋಹವನ್ನು ಕೇಂದ್ರ ಅಳವಡಿಸಿಕೊಂಡಿದೆ ಎಂದರು.

ಶಿಕ್ಷನ, ಕೌಶಲ ಹೆಚ್ಚಿಸಲು ಒಂದು ಲಕ್ಷ ಕೋಟಿ ಅನುದಾನ ನೀಡಲಾಗಿದೆ. 12 ಕೋಟಿ ಜನರಿಗೆ ಮುದ್ರಾ ಯೋಜನೆಯಡಿ ಯಾವುದೇ ಗ್ಯಾರಂಟಿ ಇಲ್ಲದೇ ಸಾಲ ನೀಡಲಾಗಿದೆ. ಪ್ರಧಾನಮಂತ್ರಿ ವಿಮಾ ಯೋಜನೆಯಡಿ ₹ 5 ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ. 19 ಕೋಟಿ ಜನರು ₹ 2,200 ಕೋಟಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಸ್ವಾತಂತ್ರ್ಯದ 70 ವರ್ಷ ನಂತರವೂ 4 ಕೋಟಿ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ದೊರೆತಿರಲಿಲ್ಲ. ರಾಜ್ಯದಲ್ಲಿ ಆರು ಲಕ್ಷ ಕುಟುಂಬಗಳಿಗೆ ಸಂಪರ್ಕವಿಲ್ಲ. ನಾಲ್ಕೈದು ತಿಂಗಳಲ್ಲಿ ಎಲ್ಲರಿಗೂ ಸಂಪರ್ಕ ಕಲ್ಪಿಸಲಾಗುವುದು. ಇಲ್ಲಿಯವರೆಗೆ 13 ಕೋಟಿ ಕುಟುಂಬಗಳಿಗೆ ಮಾತ್ರ ಅಡುಗೆ ಅನಿಲ ಸಂಪರ್ಕ ಒದಗಿಸಲಾಗಿತ್ತು. ನಾಲ್ಕು ವರ್ಷದಲ್ಲಿ 10 ಕೋಟಿ ಕುಟುಂಬಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ವಿಜಯಪುರಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಆಗ ಸರ್ಕಾರ ಎನು ಮಾಡಿತು ಎಂದು ಪ್ರಶ್ನಿಸಿದ ಅವರು, ಕೇಂದ್ರ ಬಾಲಕಿ ಮೇಲೆ ಅತ್ಯಾಚಾರ ಮಾಡಿದವರಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತಂದಿದೆ. ಈ ವಿಷಯವನ್ನೂ ವೋಟ್‌ ಬ್ಯಾಂಕ್‌ಗೆ ಬಳಸಿಕೊಳ್ಳಬಾರದು ಎಂದರು.

ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ತೊಂದರೆ ಎದುರಿಸುತ್ತಿದ್ದಾರೆ. ಶೀಘ್ರ ಮಾರುಕಟ್ಟೆಗೆ ಸಾಗಿಸಲು ರೈಲ್ವೆ ಸಂಚಾರ ಹಾಗೂ ರೈಲ್ವೆ ಅಗಲೀಕರಣ ಮಾಡಲಾಗಿದೆ. ವಿಜಯಪುರದಲ್ಲಿ ಆಹಾರ ಸಂಸ್ಕರಣ ಘಟಕ ಸ್ಥಾಪಿಸಲಾಗುವುದು ಎಂದು ಹೇಳಿದರು.

‌ಇದಕ್ಕೂ ಮೊದಲು ವಿಜಯಪುರದ ಮಹಾಜನತೆಗೆ ನಮಸ್ಕಾರಗಳು. ಪುಣ್ಯಭೂಮಿಯಲ್ಲಿ ಜನಸಿದ ಜಗಜ್ಯೋತಿ ಬಸವಣ್ಣ, ಇತಿಹಾಸ ಪ್ರಸಿದ್ಧ ಗಣಿತಜ್ಞ ಭಾಸ್ಕಾರಾಚಾರ್ಯ, ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾವ್‌, ಜ್ಞಾನ ಯೋಗಿ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಗೆ ಧನ್ಯವಾದಗಳು ಎಂದು ಕನ್ನಡದಲ್ಲಿ ಮಾತು ಆರಂಭಿಸಿದರು.

ಅತಂತ್ರವಿಲ್ಲ; ಬಹುಮತ

ವಿಜಯಪುರ: ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತ ಕೆಲವು ಮಂದಿ ಬಹುಮತ ಸಿಗುವುದಿಲ್ಲ. ಅತಂತ್ರವಾಗಲಿದೆ ಎಂದು ಹೇಳುತ್ತಿದ್ದಾರೆ. ಊರಿಬಿಸಿನಲ್ಲಿ ಕುಳಿತಿರುವ ಜನಸಾಗರವನ್ನು ಬಂದು ಅವರು ನೋಡಬೇಕು. ಐದು ವರ್ಷ ನೆಮ್ಮದಿಯಿಂದಿರಲು ಬಿಸಿಲಿನ ತಾಪವನ್ನು ಸಹಿಸಿಕೊಂಡು ಜನರು ಕುಳಿತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನೆಪ: ಕಾಂಗ್ರೆಸ್‌ ನಾಯಕರು ಪ್ರಚಾರ ಮಾಡುವುದನ್ನು ಬಿಟ್ಟು ಕಚೇರಿಯಲ್ಲಿ ಕುಳಿತು ಮೇ 15 ರಂದು ಸೋಲಿಗೆ ಮತಯಂತ್ರ ಕಾರಣ ಎಂದು ಹೇಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT