ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿ ವಾತಾವರಣಕ್ಕೆ ತಂಪು ಕೊಡುವ ಸ್ಮೂದಿ

Last Updated 9 ಮೇ 2018, 19:30 IST
ಅಕ್ಷರ ಗಾತ್ರ

ಬಿಸ್ಕೆಟ್ ಚಾಕೊಲೆಟ್ ಮಿಲ್ಕ್ ಶೇಕ್

ಬೇಕಾಗುವ ವಸ್ತುಗಳು : 7-8 ಬಿಸ್ಕೆಟ್, 4-5 ಗೋಡಂಬಿ, 1 ಚಮಚ ಕೊಕೋಪೌಡರ್, 4 ಟೇಬಲ್ ಚಮಚ ಸಕ್ಕರೆ, ಸ್ವಲ್ಪ ದಾಲ್ಚಿನ್ನಿ ಪುಡಿ, 1 ಕಪ್ ಗಟ್ಟಿ ಹಾಲು.

ಮಾಡುವ ವಿಧಾನ : ಬಿಸ್ಕೆಟ್, ಗೋಡಂಬಿ, ಕೊಕೋಪೌಡರ್, ಸಕ್ಕರೆ, ಹಾಲು, ದಾಲ್ಚಿನ್ನಿ ಪುಡಿ, ಸ್ವಲ್ಪ ನೀರು ಬೆರೆಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಕುಡಿಯಿರಿ. ಬೇಸಿಗೆಯ ದಾಹ ಈ ಮಿಲ್ಕ್ ಶೇಕ್ ಸೇವಿಸುವುದರಿಂದ ಕಡಿಮೆಯಾಗುತ್ತದೆ.

ಮಾವಿನ ಹಣ್ಣಿನ ಲಸ್ಸಿ

ಬೇಕಾಗುವ ವಸ್ತುಗಳು : 1 ಕಪ್ ಮಾವಿನ ಹಣ್ಣಿನ ತಿರುಳು, 1 ದೊಡ್ಡ ಚಮಚ ಅಗಸೆ ಬೀಜದ ಪುಡಿ, ಚಿಟಿಕಿ ಅರಷಿಣ, ಚಿಟಿಕಿ ಕರಿಮೆಣಸು ಪುಡಿ, 1 ದೊಡ್ಡ ಚಮಚ ಕಿತ್ತಳೆ ರಸ, ಚಿಟಿಕಿ ಕರಿ ಉಪ್ಪು, ಸಕ್ಕರೆ ಅಥವಾ ಜೇನುತುಪ್ಪ ರುಚಿಗೆ ಬೇಕಾದಷ್ಟು ಮತ್ತು ½ ಕಪ್ ಮೊಸರು.

ಮಾಡುವ ವಿಧಾನ : ಮಾವಿನ ಹಣ್ಣಿನ ತಿರುಳು, ಅಗಸೆ ಬೀಜದ ಪುಡಿ, ಅರಸಿನ, ಕರಿಮೆಣಸು ಪುಡಿ, ಕಿತ್ತಳೆ ರಸ, ಜೇನುತುಪ್ಪ, ಕರಿ ಉಪ್ಪು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಮೊಸರು ಸೇರಿಸಿ ಇನ್ನೊಂದು ಸುತ್ತು ತಿರುಗಿಸಿ. ಈಗ ಗಾಜಿನ ಲೋಟಗಳಿಗೆ ಹಾಕಿ. ಆರೋಗ್ಯಕರವಾದ ಪೌಷ್ಟಿಕ ಮಾವಿನ ಹಣ್ಣಿನ ಲಸ್ಸಿ ಸವಿಯಲು ಸಿದ್ಧ.

ಖರ್ಜೂರ ಮತ್ತು ಬಾಳೆಹಣ್ಣಿನ ಸ್ಮೂದಿ

ಬೇಕಾಗುವ ವಸ್ತುಗಳು : ಸಣ್ಣಗೆ ತುಂಡು ಮಾಡಿದ ½ ಕಪ್ ಬಾಳೆ ಹಣ್ಣು. ಸಣ್ಣಗೆ ಹೆಚ್ಚಿದ ಖರ್ಜೂರ ½ ಕಪ್, 1 ಕಪ್  ಹಾಲು, ಸ್ವಲ್ಪ ಮಂಜುಗಡ್ಡೆ ಪುಡಿ.

ಮಾಡುವ ವಿಧಾನ : ಸಣ್ಣಗೆ ಸುಲಿದು ಹೆಚ್ಚಿದ ಬಾಳೆಹಣ್ಣು, ಖರ್ಜೂರದ ಚೂರು, ಹಾಲು, ಮಂಜುಗಡ್ಡೆ ಪುಡಿ ಎಲ್ಲಾ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಸವಿಯಿರಿ.

ಸೇಬು-ಕ್ಯಾರೆಟ್ ಸ್ಮೂದಿ

ಬೇಕಾಗುವ ವಸ್ತುಗಳು : ಸಿಪ್ಪೆ ಸುಲಿದು ಸಣ್ಣಗೆ ಹೆಚ್ಚಿದ ಸೇಬು 1 ಕಪ್, ಸಣ್ಣಗೆ ಹೆಚ್ಚಿದ 1 ಕಪ್ ಕ್ಯಾರೆಟ್ ಚೂರುಗಳು, ½ ಕಪ್ ಹಾಲು, ½ ಕಫ್ ವೆನಿಲಾ ಐಸ್ ಕ್ರೀಮ್, ರುwಚಿಗೆ ತಕ್ಕಷ್ಟು ಸಕ್ಕರೆ.

ಮಾಡುವ ವಿಧಾನ : ಮಿಕ್ಸಿಯಲ್ಲಿ ಸೇಬಿನ ಚೂರುಗಳು, ಕ್ಯಾರೆಟ್ ಚೂರು, ಹಾಲು, ಸಕ್ಕರೆ ಸೇರಿಸಿ ರುಬ್ಬಿ. ನಂತರ ಐಸ್ ಕ್ರೀಮ್ ಸೇರಿಸಿ ಚೆನ್ನಾಗಿ ಬೆರೆಸಿ, ಗ್ಲಾಸಿಗೆ ಹಾಕಿ ಸವಿದರೆ ದೇಹ ಮತ್ತು ಮನಸ್ಸು ತಂಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT