ಶನಿವಾರ, ಮೇ 8, 2021
20 °C

ಶುಕ್ರವಾರ, 10–5–1968

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

* ಗಡಿ ವಿವಾದದ ಬಗ್ಗೆ ಹೊಸ ತತ್ವ

ಬೆಂಗಳೂರು, ಮೇ 9–
ಮೈಸೂರು– ಮಹಾರಾಷ್ಟ್ರ– ಕೇರಳ ಗಡಿ ವಿವಾದಗಳನ್ನು ಪರಿಹರಿಸಲು ಕೇಂದ್ರ ಸರಕಾರ ‘ಹೊಸ ತತ್ವಗಳನ್ನು’ ನಿರೂ‍ಪಿಸಿದೆಯೆಂಬ ದೆಹಲಿ ವರದಿ ಇಲ್ಲಿನ ಸರಕಾರಿ ವಲಯಗಳಲ್ಲಿ ಅತ್ಯಾಶ್ಚರ್ಯವನ್ನುಂಟು ಮಾಡಿದೆ.

5000 ಜನಸಂಖ್ಯೆಯಿರುವ ಗ್ರಾಮ ಅಥವಾ ಗ್ರಾಮಗಳ ತಂಡವನ್ನು ಗಡಿ ಪುನರ್‌ ವ್ಯವಸ್ಥೆಗಾಗಿ ಒಂದು ಯೂನಿಟ್ ಎಂದು ಪರಿಗಣಿಸುವುದು (20 ಸಾವಿರ ಜನಸಂಖ್ಯೆಯ ಗ್ರಾಮಗಳ ತಂಡವನ್ನು ಮಹಾಜನ್ ಒಂದು ಯೂನಿಟ್ ಎಂದು ಪರಿಗಣಿಸಿದ್ದರು). ಈ ಘಟಕದಲ್ಲಿ ಶೇಕಡಾ 55 ರಷ್ಟು ಜನರು ಮಾತನಾಡುವ ಭಾಷೆಯ ರಾಜ್ಯಕ್ಕೆ ಆ ಘಟಕವನ್ನು ಸೇರಿಸಬೇಕು.

* ಟಿ. ಶಾಮಣ್ಣ ನೂತನ ಕೈಗಾರಿಕಾ ಕಮಿಷನರ್

ಬೆಂಗಳೂರು, ಮೇ 9–
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಡೈರಕ್ಟರ್ ಶ್ರೀ ಟಿ. ಶಾಮಣ್ಣನವರನ್ನು ರಾಜ್ಯದ ಕೈಗಾರಿಕಾ ಕಮಿಷನರ್ ಆಗಿ ನೇಮಿಸಲಾಗಿದೆ. ಈ ಹುದ್ದೆಯನ್ನು ಹೊಸದಾಗಿ ಸೃಷ್ಟಿಸಲಾಗಿದೆ. ಆಹಾರ ಇಲಾಖೆಯ ಡೈರಕ್ಟರ್ ಆಗಿದ್ದ ಶ್ರೀ ಮಣಿನಾರಾಯಣ ಸ್ವಾಮಿ ಅವರನ್ನು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಡೈರಕ್ಟರ್ ಆಗಿ ನೇಮಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.