ಸೂಚ್ಯಂಕ ಏರಿಕೆ

7

ಸೂಚ್ಯಂಕ ಏರಿಕೆ

Published:
Updated:
ಸೂಚ್ಯಂಕ ಏರಿಕೆ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ ಏರಿಕೆ ದಾಖಲಿಸಿದೆ. ಸತತ ಮೂರನೇ ದಿನವೂ ಸೂಚ್ಯಂಕ ಏರುಗತಿಯಲ್ಲಿ ಇದೆ. ದಿನದ ವಹಿವಾಟಿನಲ್ಲಿ ಸೂಚ್ಯಂಕವು 103 ಅಂಶಗಳಷ್ಟು ಹೆಚ್ಚಳ ಕಂಡು 35,319 ಅಂಶಗಳಲ್ಲಿ ಅಂತ್ಯ ಕಂಡಿತು. ಡಾಲರ್‌ ಎದುರಿನ ರೂಪಾಯಿ ವಿನಿಮಯ ದರವು 15 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿರುವುದರಿಂದ ಐ.ಟಿ ಷೇರುಗಳ ಬೆಲೆ ಹೆಚ್ಚಳಗೊಂಡಿತು.

ಆರಂಭದಲ್ಲಿ ಸೂಚ್ಯಂಕವು ದುರ್ಬಲ ಆರಂಭ ಕಂಡಿತ್ತು. ವಿದೇಶಿ ನಿಧಿಗಳ ಹೊರ ಹರಿವಿನ ಕಾರಣಕ್ಕೆ ವಹಿವಾಟುದಾರರು ಲಾಭ ಮಾಡಿಕೊಳ್ಳಲು ಮಾರಾಟಕ್ಕೆ ಒಲವು ತೋರಿಸಿದ್ದರು. ಆನಂತರ ಪೇಟೆ ಚೇತರಿಕೆ ಹಾದಿಗೆ ಮರಳಿತು. ಹಿಂದಿನ ಎರಡು ವಹಿವಾಟಿನ ದಿನಗಳಲ್ಲಿ ಸೂಚ್ಯಂಕವು 300.94 ಅಂಶಗಳಷ್ಟು  ಹೆಚ್ಚಳ ಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry