ಪರಿಸರದ ಬಗ್ಗೆ ಯೋಚಿಸಿ

7

ಪರಿಸರದ ಬಗ್ಗೆ ಯೋಚಿಸಿ

Published:
Updated:

ಉಡುಪಿ ಮತ್ತು ಸುತ್ತಮುತ್ತಲಿನ ಅನೇಕ ಕ್ಷೇತ್ರಗಳಲ್ಲಿ ಕೆಲವು ದಿನಗಳಿಂದ ಅಷ್ಟಬಂಧ, ಬ್ರಹ್ಮಕಲಶ, ಜಾತ್ರೆ, ಕೋಲ, ನೇಮ ಎಂಬಿತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಎಲ್ಲಿ ನೋಡಿದರೂ ಕಂಡುಬರುತ್ತಿವೆ. ಮೊದಲೆಲ್ಲಾ ಒಂದೆರಡು ದಿನಗಳಿಗೆ ಸೀಮಿತವಾಗಿದ್ದ ಈ ಕಾರ್ಯಕ್ರಮಗಳು ಈಗ ಒಂದು ವಾರ, ಎರಡು ವಾರಗಳಿಗೆ ವಿಸ್ತರಿಸಿವೆ. ಇದರ ಪ್ರಯುಕ್ತ ವೈಭವೀಕರಣ ಜಾಸ್ತಿಯಾಗುತ್ತಿದೆ.

ಇದರಿಂದ ಪರಿಸರಕ್ಕೆ ಆಗುವ ಹಾನಿ ಅಪಾರ. ಒಂದೊಂದು ಕಾರ್ಯಕ್ರಮಕ್ಕೂ 2–3 ಕಿ.ಮೀ.ನಷ್ಟು ದೂರದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಒಂದು ಮೀಟರಿಗೆ ಒಂದರಂತೆ ಕಂಬಗಳನ್ನು ಊರಿ ಟ್ಯೂಬ್‌ಲೈಟ್‌ಗಳನ್ನು ಅಳವಡಿಸುವ ಚಾಳಿ ಶುರುವಾಗಿದೆ. ಸುಮಾರು ಒಂದು ಗಂಟೆ ಕಾಲ ಸಿಡಿಸುವ ಸಿಡಿಮದ್ದುಗಳಿಂದ ನಮ್ಮ ಪರಿಸರದ ಉಷ್ಣಾಂಶ ಹೆಚ್ಚಾಗುವುದಲ್ಲದೆ ಪರಿಸರ ಮಾಲಿನ್ಯವೂ ಹೆಚ್ಚಾಗುವುದು ಎಲ್ಲರಿಗೂ ಗೊತ್ತಿರುವ ವಿಷಯ.

ಆದರೂ ಇದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದಿರುವುದು ವಿಷಾದದ ಸಂಗತಿ. ಈ ರೀತಿ ಕಾರ್ಯಕ್ರಮಗಳು ಹತ್ತಾರು ಕಡೆ ನಡೆಯುವಾಗ ಉಂಡು ಹೆಚ್ಚಾಗಿ ಬಿಸಾಡುವ ಆಹಾರದ ಕಡೆಗೆ, ದುರ್ಬಳಕೆಯಾಗುವ ವಿದ್ಯುತ್‌ನ ಕಡೆಗೆ ಹಾಗೂ ಪರಿಸರದ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ಎಲ್ಲಾ ಧಾರ್ಮಿಕ ಮುಖಂಡರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಒಳ್ಳೆಯದು.

-ಲಲಿತಾ, ಉಡುಪಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry