ಕಾಂಗ್ರೆಸ್ ಬೊಕ್ಕಸದಲ್ಲಿ ನಾಕಾಣೆನೂ ಇಲ್ಲ

7

ಕಾಂಗ್ರೆಸ್ ಬೊಕ್ಕಸದಲ್ಲಿ ನಾಕಾಣೆನೂ ಇಲ್ಲ

Published:
Updated:
ಕಾಂಗ್ರೆಸ್ ಬೊಕ್ಕಸದಲ್ಲಿ ನಾಕಾಣೆನೂ ಇಲ್ಲ

#ಬಿಜೆಪಿ ಮತ್ತು ಜೆಡಿಎಸ್‌ನವರು ಮಾತ್ರ ಸಾಲ ಮನ್ನಾ ಮಾಡ್ತೀವಿ ಅಂತಿದ್ದಾರೆ. ಕಾಂಗ್ರೆಸ್ ಹೇಳ್ತಿಲ್ಲ, ಯಾಕೆ? ಅವ್ರಿಗೆ ಗೊತ್ತು ಬೊಕ್ಕಸದಲ್ಲಿ ನಾಕಾಣೆನೂ ಇಲ್ಲ ಅಂತ, ಪೂರ್ತಿ ನುಂಗಿ ನೀರು ಕುಡಿದಿದ್ದೀವಿ ಅಂತ...

-ಸುಭಾಶ್‌ ಶೆಟ್ಟಿ, @usshetty

ಸನ್ಮಾನ್ಯ ಯಡ್ಡಿಯವರೇ, ನಿಮ್ಮಿಂದ ರಾಜ್ಯದ ಜನ ಏನೂ ನಿರೀಕ್ಷಿಸಲಾರರು. ಮೋದಿಯಿಂದ ಒಂದು ಮೂವತ್ತು ಸೀಟು ಪ್ಲಸ್ ಆಗಬಹುದು ಹೊರತು, ನೀವು ಈ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುವುದು ಸುಳ್ಳು...

ಸಿದ್ದರಾಮಯ್ಯರವರು ಮತ್ತೆ ಪ್ರಮಾಣವಚನ ಸ್ವೀಕರಿಸುತ್ತಾರೆ. ಕಾದು ನೋಡಿ.

-ಸಂತೋಷ್. ಆರ್,‏ @Santukannadiga

ಯಡ್ಡಿ ಏಕೆ ಬೇಡ? ಸಮಾಜವಾದಿಗಳು ಮಜಾವಾದಿಗಳಾಗಿ ಬದಲಾಗುವು

ದಾದರೆ, ಭ್ರಷ್ಟ ಯಡ್ಡಿ ನಿಷ್ಠ ಯಡ್ಡಿ ಆಗಲಾರರೇ? ಜೊತೆಗೆ, ಸನ್ನಿವೇಶ ಮತ್ತು ಸಹವಾಸ ಬದಲಾದಾಗ ವ್ಯಕ್ತಿ ಬದಲಾಗುವುದಿಲ್ಲವೇ? ಇದಕ್ಕೆ ವಾಲ್ಮೀಕಿ, ಬಸವಣ್ಣರೇ ಸಾಕ್ಷಿ ಇಲ್ಲವೇ?

-ಗುಂಡಪ್ಪ ಹೊನ್ನವಳ್ಳಿ, @ramyapita

ದೇವೇಗೌಡ ಅವರಿಗೆ ಈ ತಿಂಗಳು 85 ವರ್ಷ ತುಂಬಲಿದೆ. ಹಾಗಿದ್ದರೂ, ದಕ್ಷಿಣ ಕರ್ನಾಟಕದ ತೀರಾ ಒಳಪ್ರದೇಶಗಳಲ್ಲಿ ರಸ್ತೆ ಮೂಲಕ ಸಂಚರಿಸಿ ಈಗಲೂ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಉತ್ಸಾಹದ ಗುಟ್ಟು ಏನು ಎಂದು ಕೇಳಿದಾಗ, ಅವರು ಹೇಳುತ್ತಾರೆ: ‘ಊಟಕ್ಕೆ ರಾಗಿ ಮುದ್ದೆ ಮತ್ತು ಸೊಪ್ಪಿನ ಸಾರು ಹಾಗೂ ನನ್ನ ಜನರ ಪ್ರೀತಿ’!

-ರಾಜ್‌ದೀಪ್‌ ಸರ್ದೇಸಾಯಿ, @sardesairajdeep

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry