ಪಳಂಗಂಡ ತಂಡಕ್ಕೆ ಜಯ

7

ಪಳಂಗಂಡ ತಂಡಕ್ಕೆ ಜಯ

Published:
Updated:

ಮಡಿಕೇರಿ: ಉತ್ತಮ ಆಟ ಆಡಿದ ಪಳಂ ಗಂಡ ತಂಡವು ಕೊಡವ ಕುಟುಂಬಗಳ ‘ಕುಲ್ಲೇಟಿರ ಹಾಕಿ ಉತ್ಸವ’ದಲ್ಲಿ ಬುಧವಾರ ಜಯ ಗಳಿಸಿತು.

ಸಮೀಪದ ನಾಪೋಕ್ಲು ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಮಂಡೀರ (ನೆಲಜಿ) ತಂಡದ ವಿರುದ್ಧ 5–0 ಅಂತರದಲ್ಲಿ ಜಯಿಸಿತು. ಪಳಂಗಂಡದ ಪರ ಭರತ್, ಮುತ್ತಣ್ಣ ತಲಾ ಎರಡು, ತಶ್ವಿನ್ ದೇವಯ್ಯ ಒಂದು ಗೋಲು ಗಳಿಸಿದರು.

ಮುರುವಂಡ ತಂಡವು ಚೋಯಮಾಡಂಡ ತಂಡದ ವಿರುದ್ಧ 3–0 ಅಂತರದಲ್ಲಿ ಗೆಲುವು ಸಾಧಿಸಿತು. ಮುರುವಂಡ ತಂಡದ ಕಾರ್ಯಪ್ಪ ಎರಡು, ಮಿಥುನ್‌ ಅಣ್ಣಯ್ಯ ಒಂದು ಗೋಲು ದಾಖಲಿಸಿದರು.

ಅರೆಯಂಡ ತಂಡವು ಮಂಡೇಟಿರ ತಂಡವನ್ನು (2–0) ಅಂತರದಲ್ಲಿ ಮಣಿಸಿತು. ಮಾತಂಡದ ವಿರುದ್ಧ ಕರಿನೆರವಂಡ ತಂಡವು (1–0) ಜಯಿಸಿತು.

ಶಾಂತೆಯಂಡ ತಂಡವನ್ನು ಚೇಂದಿರ ತಂಡವು 4–0 ಅಂತರ ದಲ್ಲಿ ಸೋಲಿಸಿತು. ಎರಡು ಪಂದ್ಯ ಗಳಲ್ಲಿ ಗೆದ್ದಿದ್ದ ಐತಿಚಂಡ ತಂಡವು ಕಾಳೆಂಗಡದ ವಿರುದ್ಧ 0–2 ಅಂತರ ದಲ್ಲಿ ಸೋತು, ಟೂರ್ನಿಯಿಂದ ನಿರ್ಗಮಿಸಿತು. ಕಾಳೆಂಗಡ ಪರ ಪವನ್‌ ಚೆಂಗಪ್ಪ, ಬೋಪಣ್ಣ ತಲಾ ಒಂದೊಂದು ಗೋಲು ಗಳಿಸಿದರು.

ಕುಪ್ಪಂಡ ತಂಡವು ಆಲೆಮಡ ವಿರುದ್ಧ 3–2 ಅಂತರದಲ್ಲಿ ಜಯ ಸಾಧಿಸಿತು. ಚೌರೀರ ತಂಡವು ಚೋಳಂ ಡದ ವಿರುದ್ಧವೂ (3–1), ಮಾಪಂಗಡ ತಂಡದ ವಿರುದ್ಧ ಚೇಂದಂಡ ತಂಡವೂ (2–1) ಗೆಲುವು ಪಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry