ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ಹಗಲುಗನಸು: ಶಾ ಟೀಕೆ

Last Updated 9 ಮೇ 2018, 19:30 IST
ಅಕ್ಷರ ಗಾತ್ರ

ತುಮಕೂರು: ‘ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ರಾಹುಲ್ ಬಾಬಾ ಹಗಲುಗನಸು (ದಿನ್ ಕಾ ಸಪ್ನಾ) ಕಾಣುತ್ತಿದ್ದಾರೆ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಕಿಸಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹೆಬ್ಬೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸುರೇಶ್‌ ಗೌಡ ಅವರ ಪರ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಬುಧವಾರ ಮಾತನಾಡಿದರು.

‘ರಾಹುಲ್ ಗಾಂಧಿಯವರೇ, ದೇಶದಲ್ಲಿ 2014ರ ನಂತರ ನಡೆದ ಚುನಾವಣೆಗಳನ್ನು ಒಮ್ಮೆ ತಿರುಗಿ ನೋಡಿ. ನಿಮಗೆ ನೆನಪಿಲ್ಲದಿದ್ದರೆ ನಾನೇ ನೆನಪಿಸುತ್ತೇನೆ’ ಎಂದರು.

‘2014ರ ನಂತರ 14 ರಾಜ್ಯಗಳಲ್ಲಿ ಬಿಜೆಪಿಯು ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರ ಹಿಡಿದಿದೆ. ಈಗ 15ನೇ ರಾಜ್ಯ ಕರ್ನಾಟಕದಲ್ಲೂ ಅಧಿಕಾರ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘₹ 40 ಲಕ್ಷ ಮೊತ್ತದ ಕೈಗಡಿಯಾರವನ್ನು ಸಿದ್ದರಾಮಯ್ಯ ಕಟ್ಟಿದ್ದಾರೆ. ದುಬೈನ ಡಾ. ವರ್ಮಾ ಎಂಬುವವರು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದ್ದಾರೆ. ವರ್ಮಾ ಸುಮ್ಮನೆ ಆ ವಾಚ್ ಕೊಟ್ಟರೇ? ಯಾಕೆ ಕೊಟ್ಟರು ಎಂಬ ಪ್ರಶ್ನೆಗೆ ಈವರೆಗೂ ಸಿದ್ದರಾಮಯ್ಯ ಉತ್ತರಿಸಿಲ್ಲ. ಚುನಾವಣಾ ಆಯೋಗಕ್ಕೆ ಆಸ್ತಿ ವಿವರ ಸಲ್ಲಿಕೆಯಲ್ಲಿ ಈ ವಾಚ್ ಹೊಂದಿರುವ ಬಗ್ಗೆ ಉಲ್ಲೇಖಿಸಿದ್ದೀರಾ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಬೃಹತ್ ವಿದ್ಯುತ್ ಉತ್ಪಾದನಾ ಕೇಂದ್ರವಿದ್ದಂತೆ. ಅಲ್ಲಿಂದ ಪೂರೈಕೆಯಾಗುವ ವಿದ್ಯುತ್‌ನ ಒತ್ತಡಕ್ಕೆ ಕರ್ನಾಟಕದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಸುಟ್ಟು ಹೋಗಿದೆ. ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಎಂಬ ಹೊಸ ಪರಿವರ್ತಕವನ್ನು ಅಳವಡಿಸಬೇಕಾಗಿದೆ. ಅದಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.

ಬಿ.ಸುರೇಶ್‌ ಗೌಡ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT