ಎಚ್‌.ಡಿ.ಕೋಟೆ; ಪುತ್ರಿ ಕೊಂದ ತಂದೆ ಮರ್ಯಾದೆಗೇಡು ಹತ್ಯೆ ಶಂಕೆ

7

ಎಚ್‌.ಡಿ.ಕೋಟೆ; ಪುತ್ರಿ ಕೊಂದ ತಂದೆ ಮರ್ಯಾದೆಗೇಡು ಹತ್ಯೆ ಶಂಕೆ

Published:
Updated:

ಎಚ್.ಡಿ.ಕೋಟೆ: ತಾಲ್ಲೂಕಿನ ಸಾಗರೆ ಗ್ರಾಮದಲ್ಲಿ ಶಿಲ್ಪಾ (18) ಎಂಬಾಕೆ ಕೊಲೆ ನಡೆದಿದೆ. ಮರ್ಯಾದೆಗೇಡು ಹತ್ಯೆ ಶಂಕೆ ವ್ಯಕ್ತವಾಗಿದೆ.

ಕೊಲೆ ಆರೋಪದ ಮೇಲೆ ಆಕೆ ತಂದೆ ಪ್ರಕಾಶ್, ಈತನ ಸಹೋದರ ಗೋವಿಂದೇಗೌಡ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಸಾಗರೆ ಗ್ರಾಮದ ನಿವಾಸಿ ಸೋಮನಾಯಕ ಅವರ ಪುತ್ರ ರಾಕೇಶ್‌ ಎಂಬುವರನ್ನು ಶಿಲ್ಪಾ ಪ್ರೀತಿಸುತ್ತಿದ್ದಳು. ಈ ಮಧ್ಯೆ ತಾಲ್ಲೂಕಿನ ಸೋನಳ್ಳಿ ಗ್ರಾಮದ ಬಸವರಾಜು ಜತೆ ಏಪ್ರಿಲ್‌ 20ರಂದು ಮದುವೆ ಮಾಡಿಕೊಡಲಾಗಿತ್ತು. ಆದರೆ, ಕಳೆದ ವಾರ ತನ್ನ ಪತಿ ಹತ್ತಿರ ‘ಸಂಸಾರ ನಡೆಸಲಾರೆ. ಪ್ರೀತಿಸುತ್ತಿದ್ದ ರಾಕೇಶ್‌ನೊಂದಿಗೆ ಜೀವನ ನಡೆಸುತ್ತೇನೆ’ ಎಂದು ಹಟ ಹಿಡಿದು ಜಗಳ ತೆಗೆದಿದ್ದಳು.

ನಂತರ ಶಿಲ್ಪಾ ಮತ್ತು ಬಸವರಾಜು ಒಪ್ಪಿಗೆ ಮೇರೆಗೆ ಪೋಷಕರು ಇಬ್ಬರನ್ನೂ ಬೇರ್ಪಡಿಸಿದರು. ಶಿಲ್ಪಾಳನ್ನು ಸಾಗರೆ ಮನೆಗೆ ಕರೆತಂದ ತಂದೆ ಪ್ರಕಾಶ್, ‘ಮಗಳೇ, ನಿನ್ನ ತಾಳಿಯನ್ನು ಬೇರ್ಪಡಿಸಬೇಕಾಗಿದೆ. ಕಬಿನಿ ನದಿ ಬಳಿ ಹೋಗೋಣ’ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಇತರರೊಂದಿಗೆ ಸೇರಿ ಶಿಲ್ಪಾಳನ್ನು ಕೊಂದು ಸುಟ್ಟು ಹಾಕಿದ ನಂತರ ಕಬಿನಿ ನದಿಗೆ ಬೂದಿ ಬಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry