ಗುರುವಾರ , ಮಾರ್ಚ್ 4, 2021
18 °C

ಮದುವೆ ಮನೆಯಲ್ಲಿ ಮತದಾನ ಜಾಗೃತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದುವೆ ಮನೆಯಲ್ಲಿ ಮತದಾನ ಜಾಗೃತಿ!

ಭದ್ರಾವತಿ: ಇಲ್ಲೊಂದು ಮದುವೆ ಸಂಭ್ರಮದಲ್ಲಿ ಮತದಾನ ಜಾಗೃತಿಯ ಸಂದೇಶದ ಪ್ರಚಾರ ಗಮನಸೆಳೆದಿದೆ.

ಕಾಗದ ನಗರದ ಎಂಪಿಎಂ ಕಲ್ಯಾಣ ಮಂಟಪದಲ್ಲಿ ಗುರುವಾರ ಸಪ್ತಪದಿ ತುಳಿಯಲಿರುವ ಎಸ್. ರಾಧಾ ಹಾಗೂ ಪಿ.ಎಸ್. ಕೃಷ್ಣಮೂರ್ತಿ ಅವರ ಆರತಕ್ಷತೆ ಬುಧವಾರ ನಡೆಯಿತು. ಈ ಸಂದರ್ಭದಲ್ಲಿ ಹಾಕಿದ್ದ ಜಾಗೃತಿಯ ಫಲಕ ನೋಡುಗರ ಮನಗೆದ್ದಿದೆ.

ಆರತಕ್ಷತೆಗೆ ಸ್ವಾಗತ ಕೋರುವ ಫಲಕದ ಪಕ್ಕದಲ್ಲಿ ರಾಜ್ಯ ಚುನಾವಣಾ ಆಯೋಗದ ಪ್ರಚಾರ ರಾಯಭಾರಿ ರಾಹುಲ್ ದ್ರಾವಿಡ್ ಅವರ ಫಲಕ ಇಡಲಾಗಿದ್ದು, ಹಲವು ಜಾಗೃತಿ ಘೋಷಣೆಗಳನ್ನು ಹಾಕಲಾಗಿದೆ.

ಕಲ್ಯಾಣ ಮಂಟಪದ ಒಳಗೆ ‘ಮತದಾನ ಶ್ರೇಷ್ಠ ದಾನ’, ‘ದಾನಕ್ಕಿಂತ ಶ್ರೇಷ್ಠ ಮತದಾನ’, ‘ಮತದಾನ ಪ್ರಜೆಯ ಹಕ್ಕು’, ‘ಪ್ರಜೆಗಳಿಂದ ಪ್ರಜೆಗಳಿಗೆ ಸಿಗುವ ಹಕ್ಕು ಮತದಾನ’ ಎಂದು ಸಾರುವ ಫಲಕಗಳಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.