ಮೂಗುತಿ, ಓಲೆ ವಶ

7

ಮೂಗುತಿ, ಓಲೆ ವಶ

Published:
Updated:

ಅರಕಲಗೂಡು (ಹಾಸನ): ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ₹7.10 ಲಕ್ಷ ಮೌಲ್ಯದ 475 ಗ್ರಾಂ ತೂಕದ ಚಿನ್ನದ ಮೂಗುತಿಗಳು ಹಾಗೂ ಕಿವಿ ಓಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ವೆಂಕಟರಮಣರೆಡ್ಡಿ ತಿಳಿಸಿದರು.

ಪಟ್ಟಣದ ಬೆಸ್ತರ ಬೀದಿಯ ಅರುಣ್‌ಕುಮಾರ್ ಎಂಬುವರ ಮನೆ ಪರಿಶೀಲಿಸಿದಾಗ ಒಡವೆಗಳು ಹಾಗೂ ಅವುಗಳನ್ನು ಪ್ಯಾಕ್ ಮಾಡಿ ವಿತರಿಸಲು ಬಳಸುವ 45 ಖಾಲಿ ಬಾಕ್ಸ್‌ಗಳು ಇರುವುದು ಕಂಡು ಬಂತು.

ಕೋಳಿ ಮಾಂಸ ವಶ

ಚಿಂತಾಮಣಿ:
ಜೀಡರಹಳ್ಳಿ ಸಮೀಪ ಮತದಾರರಿಗೆ ಹಂಚಲು ಓಮ್ನಿ ವಾಹನದಲ್ಲಿ ಸಾಗಿಸುತ್ತಿದ್ದ 80 ಕೆ.ಜಿ. ಕೋಳಿ ಮಾಂಸವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ತಲಾ ಒಂದು ಕೆ.ಜಿ. ತೂಕದ 80 ಪ್ಯಾಕೆಟ್‌ಗಳಿದ್ದವು. ಕೈವಾರ ಕ್ರಾಸ್‌ ಕಡೆಯಿಂದ ಹಿರೇಕಟ್ಟಿಗೇನಹಳ್ಳಿ ಕಡೆಗೆ ವಾಹನ ಹೋಗುತ್ತಿತ್ತು.

ಸಂಚಾರ ಜಾಗೃತ ದಳದಲ್ಲಿ ಆನಂದ್‌, ಎಸ್‌.ಪ್ರಸಾದ್‌, ಡಾ.ನಾಗೇಂದ್ರಬಾಬು ತಂಡದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry