ಮತದಾರರಿಗೆ ಲಕ್ಕಿ ಡ್ರಾ

7

ಮತದಾರರಿಗೆ ಲಕ್ಕಿ ಡ್ರಾ

Published:
Updated:

ಬೆಂಗಳೂರು: ಮತದಾನ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅನುಗ್ರಹ ಸಂಸ್ಥೆಯು ಲಕ್ಕಿ ಡ್ರಾ ಮೂಲಕ ಹತ್ತು ಮೋಟಾರ್‌ ಬೈಕ್‌ಗಳನ್ನು ಗೆಲ್ಲುವ ಅವಕಾಶವನ್ನು ಮತದಾರರಿಗೆ ನೀಡಲಿದೆ.

ಮೇ 12ರಂದು ಮತದಾನ ಮಾಡಿ ಇಂಕಿನ ಗುರುತುಳ್ಳ ಬೆರಳಿನ ಚಿತ್ರವನ್ನು 95900 95900ಗೆ ಐವತ್ತು ದಿನಗಳೊಳಗಾಗಿ ಕಳುಹಿಸಿಕೊಡಬೇಕು. ಮೊಬೈಲ್‌ ಸಂಖ್ಯೆಯ ಕೊನೆಯ 5 ಅಂಕಿ ಹಾಗೂ ಜುಲೈ 10ರ ಸಂಜೆ ಏಳು ಗಂಟೆಗೆ ಸನ್ಸೆಕ್ಸ್‌ನ 5 ಅಂಕಿಗಳನ್ನು ಹೋಲಿಸಿ ವಿಜೇತರನ್ನು ಘೋಷಿಸಲಾಗುವದು.

ವಿಜೇತರಿಗೆ ಬಜಾಜ್‌ ಸಿಟಿ 100ಬಿ ನೀಡಲಾಗುವುದು. ವಿಜೇತರನ್ನು ಹೊರತುಪಡಿಸಿ ಭಾಗವಹಿಸಿದ ಎಲ್ಲರಿಗೂ ಒಂದು ವರ್ಷ ವ್ಯಾಲಿಡಿಟಿ ಇರುವ ₹500 ಕ್ಯಾಷ್‌ಬಾಕ್‌ ಕೊಡುಗೆ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry