ಬುಧವಾರ, ಮಾರ್ಚ್ 3, 2021
31 °C
ಚುನಾವಣಾ ಕರ್ತವ್ಯಕ್ಕಾಗಿ ಬೆಂಗಳೂರಿನಿಂದ ಬಾಗಲಕೋಟೆಗೆ ಪ್ರಯಾಣಿಸುತ್ತಿದ್ದ ಅಧಿಕಾರಿಗಳು

ಪೊಲೀಸ್‌ ಜೀಪ್‌–ಲಾರಿ ಮುಖಾಮುಖಿ ಡಿಕ್ಕಿ: ಡಿವೈಎಸ್‌ಪಿ ಸೇರಿ ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್‌ ಜೀಪ್‌–ಲಾರಿ ಮುಖಾಮುಖಿ ಡಿಕ್ಕಿ: ಡಿವೈಎಸ್‌ಪಿ ಸೇರಿ ಮೂವರ ಸಾವು

ಬಾಗಲಕೋಟೆ: ಮಧ್ಯರಾತ್ರಿ ಬಾಗಲಕೋಟೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಡಿವೈಎಸ್‌ಪಿ ಸೇರಿ ಮೂರು ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕೂಡಲ ಸಂಗಮ ಕ್ರಾಸ್ ಬಳಿ ಲಾರಿ ಹಾಗೂ ಪೊಲೀಸ್ ಜೀಪ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಗಳೂರಿನ ಸಿಐಡಿ ಡಿವೈಎಸ್‌ಪಿ ಬಾಳೇಗೌಡ(55), ಸಿಐಡಿ ಪಿಎಸ್‌ಐ ಕೆ.ಎಚ್.ಶಿವಸ್ವಾಮಿ(55) ಹಾಗೂ ಚಾಲಕ ವೇಣು ಗೋಪಾಲ(25) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಕರ್ತವ್ಯಕ್ಕಾಗಿ ಬೆಂಗಳೂರಿನಿಂದ ಬಾಗಲಕೋಟೆಗೆ ಬರುವಾರ ಮಾರ್ಗಮಧ್ಯೆ ಮಧ್ಯರಾತ್ರಿ 12.30ಕ್ಕೆ ಅಪಘಾತ ಸಂಭವಿಸಿದೆ.

ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹಾಗೂ ಡಿವೈಎಸ್‌ಪಿ ಗಿರೀಶ ಸೇರಿದಂತೆ ಇತರೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡಿವೈಎಸ್‌ಪಿ ಬಾಳೆಗೌಡ ಬೆಂಗಳೂರಿನ ಕೊಟ್ಟಿಗೆಪಾಳ್ಯಾ ನಿವಾಸಿ, ಸಿಪಿಐ ಕೆ.ಎಚ್‌.ಶಿವಸ್ವಾಮಿ ಚಾಮರಾಜನಗರ ಜಿಲ್ಲೆಯವರು ಎಂದು ತಿಳಿದು ಬಂದಿದೆ. ಚಾಲಕ ಸಹ ಬೆಂಗಳೂರು ಮೂಲದವರು ಎನ್ನಲಾಗಿದೆ.

ಬಡ್ತಿ ನೀಡಿ ಸಿಐಡಿಗೆ: ತುಮಕೂರು, ಕುಣಿಗಲ್‌ನಲ್ಲಿ ವೃತ್ತನೀರಿಕ್ಷಕರಾಗಿ ಕರ್ತವ್ಯ ನಿರ್ವಸಿದ್ದ ಬಾಳೇಗೌಡ ಅವರಿಗೆ ಇತ್ತೀಚೆಗಷ್ಟೇ ಡಿವೈಎಸ್‌ಪಿ ಆಗಿ ಬಡ್ತಿ ನೀಡಿ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.