ಕಾನ್‌ನಲ್ಲಿ ದೀಪಿಕಾ

7

ಕಾನ್‌ನಲ್ಲಿ ದೀಪಿಕಾ

Published:
Updated:
ಕಾನ್‌ನಲ್ಲಿ ದೀಪಿಕಾ

ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಕಾನ್ ಚಿತ್ರೋತ್ಸವದ ರೆಡ್‌ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಲು ಸಿದ್ಧರಾಗಿದ್ದಾರೆ. ಬುಧವಾರ ಕಾನ್ಸ್‌ನ ಹೋಟೆಲೊಂದರಿಂದ ತಮ್ಮ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಚೆಲುವೆ, ತಮ್ಮ ಲೊರಿಯಲ್‌ ಉತ್ಪನ್ನಗಳ ರಾಯಭಾರಿ ಎನ್ನುವುದನ್ನೂ ಸೂಚ್ಯವಾಗಿ ತಿಳಿಸಿದ್ದಾರೆ. ಲೊರಿಯಲ್‌ಸ್ಕಿನ್‌, ಲೊರಿಯಲ್‌ ಹೇರ್‌, ಲೊರಿಯಲ್‌ಕೇರ್‌ ಎಂಬ ಹ್ಯಾಷ್‌ಟ್ಯಾಗ್‌ಗಳ ಜೊತೆಗೆ ಕಾನ್ಸ್‌ 2018 ಎಂದೂ ಬರೆದುಕೊಂಡಿದ್ದಾರೆ.

ಮೈಗಪ್ಪುವ ನೀಲಿ ಡೆನಿಮ್‌, ಬಿಳಿಯ ಬಣ್ಣದ ಗಿಡ್ಡನೆಯ ಟಾಪ್‌ ಧರಿಸಿದರುವ ದೀಪಿಕಾ, ಹೈಹಿಲ್ಸ್‌ನಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಈ ಚಿತ್ರದೊಂದಿಗೆ ಕಾನ್‌ನಲ್ಲಿ ಮಿಂಚುವ ಎಲ್ಲ ಮುನ್ಸೂಚನೆಯನ್ನೂ ಅಭಿಮಾನಿಗಳಿಗೆ ದೀಪಿಕಾ ಹರಿಬಿಟ್ಟಿದ್ದಾರೆ. ಕಳೆದವರ್ಷ ತಾವಿಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ಈ ಸಲವೂ ಇಳಿದುಕೊಂಡಿರುವುದನ್ನೂ ಬಾಲ್ಕನಿಯಲ್ಲಿ ನಿಂತಿರುವ ಚಿತ್ರ ಸ್ಪಷ್ಟಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry