ಜೀ ವಾಹಿನಿಯಲ್ಲಿ ಮಹಾಸಂಗಮ

7
‘ಸರಿಗಮಪ’ ಮತ್ತು ‘ಕಾಮಿಡಿ ಕಿಲಾಡಿಗಳು’

ಜೀ ವಾಹಿನಿಯಲ್ಲಿ ಮಹಾಸಂಗಮ

Published:
Updated:
ಜೀ ವಾಹಿನಿಯಲ್ಲಿ ಮಹಾಸಂಗಮ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಸರಿಗಮಪ’ ಮತ್ತು ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಗಳು ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿವೆ. ಇವೆರಡೂ ಕಾರ್ಯಕ್ರಮಗಳನ್ನು ವೀಕ್ಷಿಸಲು ಕಾದು ಕುಳಿತಿರುವವರು ಹಳ್ಳಿಯಲ್ಲೂ ಇದ್ದಾರೆ, ನಗರ–ಪಟ್ಟಣಗಳಲ್ಲೂ ಇದ್ದಾರೆ. ಈ ಎರಡೂ ಕಾರ್ಯಕ್ರಮಗಳ ವೀಕ್ಷಕರಿಗೆ ವಾಹಿನಿ ಈಗ ಒಂದು ಹೊಸ ಸುದ್ದಿ ನೀಡಿದೆ.

ಇವೆರಡೂ ಕಾರ್ಯಕ್ರಮಗಳು ಈ ಶನಿವಾರ ಮತ್ತು ಭಾನುವಾರ ಒಂದೇ ಸಮಯಕ್ಕೆ (ಸಂಜೆ 7.30) ಪ್ರಸಾರ ಆಗಲಿವೆ. ‘ಸರಿಗಮಪ’ ಮತ್ತು ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಗಳ ಸ್ಪರ್ಧಾಳುಗಳನ್ನು ಒಂದೇ ವೇದಿಕೆಯ ಅಡಿ ತಂದಿರುವ ವಾಹಿನಿ ಇದಕ್ಕೆ ‘ಮಹಾಸಂಗಮ’ ಎಂಬ ಹೆಸರಿಟ್ಟಿದೆ.

‘ಎಲ್ಲ ಲಿಟಲ್ ಚಾಂಪ್ಸ್ ಜೋಡಿಯಾಗಿ ಹಾಡಿರುವುದು, ಸೀಸನ್ 12ರಲ್ಲಿ ಗೆಲುವು ಸಾಧಿಸಿದ್ದ ಅನ್ವಿತ ಅತಿಥಿಯಾಗಿ ಒಂದು ಹಾಡು ಹಾಡಿರುವುದು, ಪುಟಾಣಿ ನೇಹಾಳ ಮುದ್ದಾದ ಧ್ವನಿ, ಆ ಹಾಡಿಗೆ ಹೆಜ್ಜೆ ಹಾಕಿರುವ ರಕ್ಷಿತಾ ಮತ್ತು ಇತರರು’ ಈ ‘ಮಹಾಸಂಗಮ’ದ ವೈಶಿಷ್ಟ್ಯಗಳು ಎಂದು ವಾಹಿನಿ ಹೇಳಿದೆ.

ನಿರೂಪಕಿ ಅನುಶ್ರೀ ಅವರು ಮದುವೆಯಾದರೆ ನಿರೂಪಕಿಯ ಕೆಲಸ ಮುಂದುವರಿಸುತ್ತಾರಾ, ಅವರು ಮದುವೆ ಆಗುತ್ತಾರಾ ಎಂಬುದನ್ನು ಸ್ಕಿಟ್ ರೂಪದಲ್ಲಿ ತೋರಿಸಿದ್ದಾರಂತೆ ಕಾಮಿಡಿ ಕಿಲಾಡಿಗಳು!

ಇವೆಲ್ಲವುಗಳ ಜೊತೆಯಲ್ಲೇ ಹಂಸಲೇಖ ಅವರ ಅನುಭವದ ಮಾತುಗಳು, ಇತರ ನಿರ್ಣಾಯಕರ ಮಾತುಗಳು ಕಾರ್ಯಕ್ರಮದಲ್ಲಿ ಇರಲಿವೆ. ಒಟ್ಟು 26 ಪ್ರತಿಭೆಗಳು, ಎರಡು ಕಾರ್ಯಕ್ರಮಗಳು, ಎರಡು ಕಾರ್ಯಕ್ರಮಗಳ ನಿರ್ಣಾಯಕರು, ಇಬ್ಬರು ನಿರೂಪಕರು, ಎರಡು ಕಾರ್ಯಕ್ರಮಗಳ ತಂತ್ರಜ್ಞರು ಒಟ್ಟಾಗಿ ಸೇರಿ ಆಗಿರುವ ಕಾರ್ಯಕ್ರಮ ಇದು ಎಂದು ವಾಹಿನಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry