‘ಅರಣ್ಯಕಾಂಡ’ ಚಿತ್ರೀಕರಣ ಮುಕ್ತಾಯ

7

‘ಅರಣ್ಯಕಾಂಡ’ ಚಿತ್ರೀಕರಣ ಮುಕ್ತಾಯ

Published:
Updated:
‘ಅರಣ್ಯಕಾಂಡ’ ಚಿತ್ರೀಕರಣ ಮುಕ್ತಾಯ

ಇನ್‍ಫಿನಿಟಿ ಆರ್ಟ್ಸ್‌ ಲಾಂಛನದಲ್ಲಿ ಅನಿಲ್ ಬ್ರಹ್ಮಾವರ್ ಮತ್ತು ಲಕ್ಷ್ಮಿ ಅನಿಲ್ ನಿರ್ಮಾಣದ ‘ಅರಣ್ಯಕಾಂಡ’ (ದಾರಿ ಯಾವುದಯ್ಯಾ ವೈಕುಂಠಕೆ..!) ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಪೂರ್ಣಗೊಂಡಿದೆ.

ರಘುನಂದನ್ ಎಸ್. ನಿರ್ದೇಶನದ ಈ ಚಿತ್ರಕ್ಕೆ ರಾಕೇಶ್ ಅವರ ಛಾಯಾಗ್ರಹಣವಿದೆ. ಸಂಗೀತ ಸಂಯೋಜನೆ ಹೇಮಂತ್ ಜೋಯಿಸ್ ಅವರದ್ದು. ಬಿ.ಎಸ್. ಕೆಂಪರಾಜು ಸಂಕಲನ ನಿರ್ವಹಣೆ ಮಾಡಿದ್ದಾರೆ. ದೀಪಕ್ ರಾಜು ಕಲರಿಸ್ಟ್ ನಿರ್ವಹಣೆ ಮಾಡಿದ್ದು, ವಿಎಫ್‍ಎಕ್ಸ್‌ ಮತ್ತು ಗ್ರಾಫಿಕ್ಸ್ ನಿರ್ವಹಣೆ  ತ್ರಿನೇತ್ರ ಅವರದು.

ಈ ಚಿತ್ರದಲ್ಲಿ ಎರಡು ಹಾಡುಗಳಿವೆ. ಅಮರ್, ಅರ್ಚನಾ ಕೊಟ್ಟಿಗೆ, ಗುರುರಾಜ್ ಶೆಟ್ಟಿ, ಎಕ್ಕಡೆ ಪವನ್ ದಾಮೋದರ್, ಆಯುಷ್‌, ಮುನಿಪ್ರಸಾದ್, ಚಂದನ್ ರಾವ್, ಸುಷ್ಮಾ ಗೌಡ ಅಭಿನಯಿಸಿದ್ದಾರೆ.

ನಾಯಕ ಬುದ್ಧಿವಂತ ಕಳ್ಳ. ನಾಯಕಿ ವಾರಪತ್ರಿಕೆಯೊಂದರಲ್ಲಿ ಪತ್ರಕರ್ತೆ. ಕಾಡಿನಲ್ಲಿ ಹುದುಗಿರುವ ವಿಷಯದ ಮಾಹಿತಿ ದೊರಕುತ್ತದೆ. ನಾಯಕ ತಂಡ ರಚಿಸಿ ಅದರ ಹುಡುಕಾಟಕ್ಕೆ ಹೊರಡುತ್ತಾನೆ.

ಅಲ್ಲಿ ಜರುಗುವ ನೋವು, ನಲಿವು, ಹತಾಶೆಯನ್ನು ವೈಭವೀಕರಿಸದೆ ನೈಜವಾಗಿ ಚಿತ್ರಿಕರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕರು. ⇒v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry