‘ಪಾದರಸ’ ಮೊದಲ ಪ್ರತಿ ಸಿದ್ಧ

7

‘ಪಾದರಸ’ ಮೊದಲ ಪ್ರತಿ ಸಿದ್ಧ

Published:
Updated:
‘ಪಾದರಸ’ ಮೊದಲ ಪ್ರತಿ ಸಿದ್ಧ

ಆರ್ಟ್‌ ಎನ್ ಸೋಲ್ ಮೀಡಿಯಾ ಸರ್ವೀಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಪಾದರಸ’ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ.

ಶೀಘ್ರವೇ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ನೊಗ ಹೊತ್ತಿದ್ದಾರೆ ಹೃಷಿಕೇಶ್ ಜಂಬಗಿ. ಎಂ.ಬಿ. ಅಳ್ಳಿಕಟ್ಟಿ ಅವರ ಛಾಯಾಗ್ರಹಣ ಇರುವ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ, ಗೌಸ್ ಪೀರ್, ಸಂಜಯ್ ಕುಲಕರ್ಣಿ ಅವರ ಸಾಹಿತ್ಯ ಚಿತ್ರಕ್ಕಿದೆ. ಕೆ.ಎಂ. ಪ್ರಕಾಶ್ ಸಂಕಲನ ಇರುವ ಚಿತ್ರಕ್ಕೆ ಕುಬೇರ್ ಕೆ. ಮಂಡ್ಯ ಸಹನಿರ್ದೇಶನ ಮಾಡಿದ್ದಾರೆ.

ಕಲೆ ಬಾಬು ಖಾನ್ ಅವರದು. ಮನುಮಾಸ್ಟರ್, ನಾಗಿ, ಜಗನ್ ಅವರ ನೃತ್ಯ ನಿರ್ದೇಶನವಿದೆ. ಪ್ರಕಾಶ್‌ ಮಧುಗಿರಿ ನಿರ್ಮಾಣ ನಿರ್ವಹಣೆ ಮಾಡಿದ್ದಾರೆ. ಸಂಚಾರಿ ವಿಜಯ್, ವೈಷ್ಣವಿ ಮೆನನ್, ಮನಸ್ವಿನಿ, ನಿರಂಜನ್ ದೇಶಪಾಂಡೆ, ಜೈಜಗದೀಶ್, ಚಿ. ಗುರುದತ್, ಶೋಭರಾಜ್, ಭವ್ಯಾ, ಹನುಮಂತೇಗೌಡ, ವಿಜಯ್ ಚೆಂಡೂರ್, ರವಿಕಲ್ಯಾಣ್ ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry