ಭಾನುವಾರ, ಫೆಬ್ರವರಿ 28, 2021
31 °C

ಬಾಲಿವುಡ್‌ನಲ್ಲೀಗ ಮದುವೆ ಸಂಭ್ರಮ: ದಾಂಪತ್ಯಕ್ಕೆ ಕಾಲಿಟ್ಟ ನೇಹಾ ಧೂಪಿಯ– ಅಂಗದ್‌ ಸಿಂಗ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನಲ್ಲೀಗ ಮದುವೆ ಸಂಭ್ರಮ: ದಾಂಪತ್ಯಕ್ಕೆ ಕಾಲಿಟ್ಟ ನೇಹಾ ಧೂಪಿಯ– ಅಂಗದ್‌ ಸಿಂಗ್‌

ಗುಟ್ಟಾಗಿ ಮದುವೆಯಾಗಿದ್ದ ಬಾಲಿವುಡ್‌ ನಟಿ ನೇಹಾ ಧೂಪಿಯಾ ಇದ್ದಕ್ಕಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಮದುವೆ ಚಿತ್ರಗಳನ್ನು ಹರಿಬಿಟ್ಟು ಬಾಲಿವುಡ್‌ ಮಂದಿಯಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಬಾಲಿವುಡ್‌ ನಟ ಹಾಗೂ ಗೆಳೆಯ ಅಂಗದ್‌ ಸಿಂಗ್‌ ಜತೆ ದೆಹಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಸಿರುವ ಧೂಪಿಯಾ ತಮ್ಮ ಮದುವೆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಇದು ನನ್ನ ಜೀವನದ ಅತ್ಯುತ್ತಮ ನಿರ್ಧಾರ. ಈ ದಿನ ನಾನು ನನ್ನ ಉತ್ತಮ ಗೆಳೆಯನನ್ನು ಮದುವೆಯಾಗಿದ್ದೀನಿ. ಹೆಲೋ ಇಲ್ಲಿದ್ದಾರೆ ನನ್ನ ಪತಿ’ ಎಂದು ತಮ್ಮ ಮದುವೆ ಚಿತ್ರಕ್ಕೆ ಅಡಿ ಬರಹವನ್ನೂ ನೀಡಿದ್ದಾರೆ.

ತಾರಾ ದಂಪತಿಯ ಮದುವೆಗೆ ಕರಣ್‌ ಜೋಹರ್‌, ವಿದ್ಯಾಬಾಲನ್‌, ಸೋನಾಕ್ಷಿ ಸಿನ್ಹಾ ಸೇರಿದಂತೆ ಹಲವು ನಟ–ನಟಿಯರು ಶುಭಕೋರಿದ್ದಾರೆ.

ಇದಕ್ಕೂ ಮೊದಲು ನಟಿ ಸೋನಂ ಕಪೂರ್‌ ಮದುವೆ ಬಾಲಿವುಡ್‌ ಗಲ್ಲಿಯಲ್ಲಿ ಅಚ್ಚರಿ ಹಾಗೂ ಸಂಭ್ರಮ ಎರಡನ್ನೂ ಒಟ್ಟಿಗೆ ತಂದಿಟ್ಟಿತ್ತು.

ಸೂಪರ್‌ಸ್ಟಾರ್ ಶ್ರೀದೇವಿ ದಿಢೀರ್‌ ನಿಧನದಿಂದಾಗಿ ನಟಿ ಸೋನಂ ಮದುವೆ ಮುಂದಿನ ವರ್ಷಕ್ಕೆ ಮುಂದೂಡಲಾಗುವುದು ಎಂದು ಹೇಳಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಆ ಸುದ್ದಿಯೆಲ್ಲಾ ಸುಳ್ಳಾಗಿ ನಿರ್ಧರಿಸಿದ್ದಕ್ಕಿಂತ ಒಂದು ತಿಂಗಳು ಮುಂಚಿತವಾಗಿಯೇ ಮದುವೆ ಕಾರ್ಯ ನೆರವೇರುವ ಮೂಲಕ ಅಭಿಮಾನಿಗಳು ಅಚ್ಚರಿಗೊಂಡಿದ್ದರು.

ಸೋನಂ ಮದುವೆಯನ್ನು ಇದೇ ವರ್ಷದ(2018) ಜೂನ್‌– ಜುಲೈ ತಿಂಗಳಲ್ಲಿ ಜೋಧ್‌ಪುರದ ಉಮೈದ್‌ ಭವನ ಅರಮನೆಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಫೆಬ್ರುವರಿ 24ರಂದು ಶ್ರೀದೇವಿ ಸಾವನ್ನಪ್ಪಿದ್ದರಿಂದ ಮದುವೆ ಮುಂದಿನ ವರ್ಷಕ್ಕೆ ಮುಂದೂಡಲಾಗುವುದು ಎಂದು ಕುಟುಂಬದ ಮೂಲಗಳು ಹೇಳಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.