ಇದ್ದ ಮೂವರಲ್ಲಿ ಕಳ್ಳನಾರು?

7

ಇದ್ದ ಮೂವರಲ್ಲಿ ಕಳ್ಳನಾರು?

Published:
Updated:

‘ಎಪಿಕ್ ಅಕ್ರಮ: ಆಯೋಗದ ಕದ ತಟ್ಟಿದ ಮೂರು ಪಕ್ಷಗಳು’ (ಪ್ರ.ವಾ., ಮೇ 10) ಸುದ್ದಿ ಓದಿ ಚಕಿತಗೊಂಡೆ.

‘ಬಲಾಢ್ಯ’ರಿಂದ ಮಾತ್ರ ಇಂಥ ಅಕ್ರಮಗಳನ್ನು ನಡೆಸಲು ಸಾಧ್ಯವೆಂಬುದು ಹಿಂದಿನ ಅನೇಕ ಪ್ರಸಂಗಗಳಿಂದ ಪ್ರಜೆಗಳಾದ ನಾವು ಕಲಿತುಕೊಂಡ ಪಾಠ. ಆದರೆ ಇಂದಿನ ಈ ಅಕ್ರಮ ಕುರಿತು ತನಿಖೆಯಾಗಲಿ ಎಂದು ಮೂರೂ ರಾಜಕೀಯ ಪಕ್ಷದವರು ಚುನಾವಣಾ ಆಯೋಗಕ್ಕೆ ಮೊರೆ ಹೋಗಿರುವುದು ವಿಶೇಷವೆನಿಸಿದೆ. ‘ನಾನಲ್ಲ ಅವನು’ ಎಂದು ಇನ್ನುಳಿದವರತ್ತ ಬೆರಳು ತೋರಿಸುತ್ತಿದ್ದಾರೆ ನಮ್ಮ ರಾಜಕೀಯ ಮುಖಂಡರು.

‘ಇದ್ದ ಮೂವರಲ್ಲಿ ಕಳ್ಳ ಯಾರಿರಬಹುದು’ ಎಂಬುದು ನಿಜಕ್ಕೂ ಕುತೂಹಲದ ಸಂಗತಿಯಾಗಿದೆ. ಸತ್ಯ ಹೊರಬಿದ್ದರೆ, ಮುಂದೆ ಅದುವೇ ಒಂದು ‘ಎಪಿಕ್’ಗೆ (ಮಹಾಕಾವ್ಯ) ವಸ್ತುವಾದೀತು! ಚುನಾವಣೆಯನ್ನು ಕುರುಕ್ಷೇತ್ರ ಮಹಾಯುದ್ಧಕ್ಕೆ ಕೆಲವರು ಹೋಲಿಸಿರುವುದರಿಂದ, ಸದರಿ ‘ಎಪಿಕ್’ ಮತ್ತೊಂದು ‘ಮಹಾಭಾರತ’ದ ಸೃಷ್ಟಿಗೆ ಪ್ರೇರಣೆಯಾಗಬಾರದೇಕೆ?

-ಮಲ್ಲಿಕಾರ್ಜುನ ಹುಲಗಬಾಳಿ, ಬನಹಟ್ಟಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry