ತಿರುಗಿಯೂ ನೋಡದ ಮುಠ್ಠಾಳರ್, ಚೋದ್ಯವ ಕಾಣೋ... ಹರಹರಾ ಶ್ರೀ ಆನಂದೇಶ್ವರ!

7

ತಿರುಗಿಯೂ ನೋಡದ ಮುಠ್ಠಾಳರ್, ಚೋದ್ಯವ ಕಾಣೋ... ಹರಹರಾ ಶ್ರೀ ಆನಂದೇಶ್ವರ!

Published:
Updated:
ತಿರುಗಿಯೂ ನೋಡದ ಮುಠ್ಠಾಳರ್, ಚೋದ್ಯವ ಕಾಣೋ... ಹರಹರಾ ಶ್ರೀ ಆನಂದೇಶ್ವರ!

* ಅಬ್ಬರಿಸಿ ಬೊಬ್ಬಿರಿದರ್, ಕೋಟಿ ಕಪ್ಪುಹಣ ಚೆಲ್ಲಿದರ್, ಇತ್ತ ತಿರುಗಿಯೂ ನೋಡದ ಮುಠ್ಠಾಳರ್ ಎದ್ದೆದ್ದು ಬಿದ್ದು ಜನರ ಕಾಲಿಗೆ ಬಿದ್ದವರ್, ಕೈಮುಗಿದು ಮತ ಕೇಳಿದವರ್, ಮೇ ಹದಿನೈದರಲ್ ಅಳುವರಾರ್ ನಗುವರಾರ್ ಚೋದ್ಯವ ಕಾಣೋ... ಹರಹರಾ ಶ್ರೀ ಆನಂದೇಶ್ವರ!

–ಆನಂದ್‌ ಜಿ. ಬಿದರಕುಂದಿ, @anandbidarkundi

* ಕೆಲವರಿಗೆ ಬ್ಯಾಂಕ್‌ನಲ್ಲಿ ಡೆಪಾಸಿಟ್ ಇಡೋ ಚಾಳಿ, ಇನ್ನು ಕೆಲವರಿಗೆ ಎಲೆಕ್ಷನ್‌ನಲ್ಲಿ ನಿಂತು ಡೆಪಾಸಿಟ್ ಕಳ್ಕೊಳಕ್ಕೆ ಆಸೆ. ಹಾಗಂತ ನೀವು ವೋಟ್ ಹಾಕದನ್ನ ಮರೀಬೇಡಿ. #ಬನ್ನಿಮತಚಲಾಯಿಸಿ #ಮೇ12

–ಅಶ್ವಿನ್ ಸುಂದರೇಶ್‌, @SundareshAshwin

* ನನಗೊಂದು ಕನಸಿದೆ. ಹುಚ್ಚ ವೆಂಕಟ್ ಎಲೆಕ್ಷನ್ ಗೆಲ್ಬೇಕು, ಆಡಳಿತ ಪಕ್ಷಕ್ಕೆ ಬೆಂಬಲ ಕೊಟ್ಟು ಸ್ಪೀಕರ್ ಆಗ್ಬೇಕು, ‘ನನ್ಮಗಂದ್ ಮುಚ್ರೋ ಬಾಯಿ, ಏನ್ಗಲಾಟೆ’...

–ಲೋಕೇಶ್‌ ಕಮದೊಳ್ಳಿ, @KamadolliLokesh

* ಟಿಪ್ಪು ಜಯಂತಿ ಜೊತೆ ಎಲ್ಲಾ ಜಯಂತಿಗಳನ್ನೂ ರದ್ದು ಮಾಡಲಿ. ಆದರೆ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ರದ್ದು ಮಾಡದಿದ್ದರೆ ಸಾಕು. ಯೋಗಿ ಇಲ್ಲಿಗೆ ಬರೋದೇ ಇಲ್ಲಿಯ ಆಡಳಿತ ನೋಡಿ ಕಲಿಯಲು.

ಕಬಕ ಬಶೀರ್‌, @bkabaka

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry