ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ನೆರವಿನೊಂದಿಗೆ 104 ವರ್ಷದ ವಿಜ್ಞಾನಿ ಆತ್ಮಹತ್ಯೆ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಜಿನೀವಾ: ‘ಆಸ್ಟ್ರೇಲಿಯಾದ 104 ವರ್ಷದ ವಿಜ್ಞಾನಿಯೊಬ್ಬರು ಸ್ವಿಟ್ಜರ್ಲೆಂಡ್‌ಗೆ ತೆರಳಿ ಗುರುವಾರ ವೈದ್ಯರ ನೆರವನ್ನುಪಡೆದು ಆತ್ಮಹತ್ಯೆ ಮಾಡಿಕೊಂಡರು’ ಎಂದು ಸ್ವಿಸ್‌ ಫೌಂಡೇಶನ್‌ ತಿಳಿಸಿದೆ.

ಡೇವಿಡ್‌ ಗೂಡಾಲ್‌ ಮೃತ ವಿಜ್ಞಾನಿ. ‘ಕಾಯಿಲೆಯಿಂದೇನೂ ನಾನು ಬಳಲುತ್ತಿಲ್ಲ. ಆದರೆ ಜೀವನದ ಉತ್ತಮ ಗಳಿಗೆಗಳು ಮುಗಿದಿವೆ. ಈ ಕಾರಣದಿಂದಷ್ಟೆ ಜೀವನ ಕೊನೆಗೊಳಿಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಅವರು ಹೇಳಿದ್ದರು.

‘ಲೈಫ್‌ ಸೈಕಲ್‌ ಕ್ಲಿನಿಕ್‌ನಲ್ಲಿ ರಾಸಾಯನಿಕವೊಂದನ್ನು ಅವರ ದೇಹಕ್ಕೆ ಸೇರಿಸುವ ಮೂಲಕ ಯಾವುದೇ ವೇದನೆಯಿಲ್ಲದೇ ಅವರು ಸಾವನ್ನಪ್ಪುವಂತೆ ಮಾಡಲಾಯಿತು’ ಎಂದು ಎಕ್ಸಿಟ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ಸಂಸ್ಥಾಪಕ ಫಿಲಿಪ್‌ ನಿಟ್ಸ್‌ಚೆಕ್‌ ತಿಳಿಸಿದರು. ಡೇವಿಡ್‌ ಅವರು ಸ್ವಿಟ್ಜರ್ಲೆಂಡ್‌ಗೆ ಬರಲು ಈ ಸಂಸ್ಥೆ ನೆರವಾಗಿತ್ತು.

ಆಸ್ಟ್ರೇಲಿಯಾದ ಕಾನೂನಿನಲ್ಲಿ ಈ ರೀತಿಯ ಸಾವಿಗೆ ಅವಕಾಶವಿಲ್ಲ. ಈ ವರ್ಷದ ಆರಂಭದಲ್ಲಿ ಡೇವಿಡ್‌ ಆತ್ಮಹತ್ಯೆಗೆ ಯತ್ನಿಸಿ ವಿಫಲರಾದ ಬಳಿಕ ಸ್ವಿಸ್‌ ಫೌಂಡೇಶನ್‌ನ ಸಂಪರ್ಕಕ್ಕೆ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT