ಡ್ಯಾಂ ಸ್ಫೋಟ 41 ಮಂದಿ ಸಾವು

7

ಡ್ಯಾಂ ಸ್ಫೋಟ 41 ಮಂದಿ ಸಾವು

Published:
Updated:

ನೈರೋಬಿ: ಕಿನ್ಯಾದ ರಿಫ್ಟ್‌ ಕಣಿವೆಯಲ್ಲಿ ಡ್ಯಾಂ ಸ್ಫೋಟಗೊಂಡು, 20 ಮಕ್ಕಳು ಸೇರಿದಂತೆ 41 ಮಂದಿ ಸಾವನ್ನಪ್ಪಿದ್ದಾರೆ. ತೀರ ಪ್ರದೇಶದಲ್ಲಿದ್ದ ನೂರಾರು ಮನೆಗಳು ನಾಶವಾಗಿವೆ.

ಸೊಲಾಯಿಯಲ್ಲಿರುವ ಪಟೇಲ್‌ ಡ್ಯಾಂ ಬುಧವಾರ ಸ್ಫೋಟಗೊಂಡು, ನೂರಾರು ಮನೆಗಳು, ಕೊಚ್ಚಿ ಹೋಗಿದ್ದು, ಹಲವಾರು ಜನರು ಕಾಣೆಯಾಗಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿ ಜೋಸೆಫ್‌ ಕಿಯೊಕೊ ತಿಳಿಸಿದರು.

ಕಿನ್ಯಾ ಅಧಿಕಾರಿಗಳ ಪ್ರಕಾರ ಮಾರ್ಚ್‌ನಿಂದೀಚೆಗೆ ಋತುಮಾನದ ಮಳೆಯಿಂದ ಉಂಟಾದ ಪ್ರವಾಹದಲ್ಲಿ 170 ಮಂದಿ ಸಾವನ್ನಪ್ಪಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry