ಮುತಾಲಿಕ್‌ ರಿಟ್‌ ಅರ್ಜಿ ವಜಾ

7

ಮುತಾಲಿಕ್‌ ರಿಟ್‌ ಅರ್ಜಿ ವಜಾ

Published:
Updated:
ಮುತಾಲಿಕ್‌ ರಿಟ್‌ ಅರ್ಜಿ ವಜಾ

ನವದೆಹಲಿ: ‘ಯಾವುದೇ ಸಮುದಾಯದ ಹಿಂದುಳಿದಿರುವಿಕೆ ಹಾಗೂ ಸಾಮಾಜಿಕ ಸ್ಥಿತಿಗತಿಯ ಸುಧಾರಣೆಗಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡುವುದು ಧರ್ಮಾಧಾರಿತ ಮತ ಯಾಚನೆ ಅಲ್ಲ’ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್‌, ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಅಂಶಗಳನ್ನು ವಿರೋಧಿಸಿ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್‌ ಮುತಾಲಿಕ್‌ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾ ಮಾಡಿದೆ.

‘ಆಯೋಗವು ಒಮ್ಮೆ ಅಧಿಸೂಚನೆ ಹೊರಡಿಸಿ, ಚುನಾವಣೆ ಪ್ರಕ್ರಿಯೆ ಆರಂಭ ವಾಯಿತೆಂದರೆ ಇಂತಹ ಪ್ರಕರಣಗಳಲ್ಲಿ ಕೋರ್ಟ್‌ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಈ ಹಿಂದೆಯೇ ಅನೇಕ ತೀರ್ಪುಗಳನ್ನು ನೀಡಲಾಗಿದೆ’ ಎಂದು ಅರ್ಜಿಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿತು.

ಕಾಂಗ್ರೆಸ್‌ ಪಕ್ಷವು ಏಪ್ರಿಲ್‌ 27ರಂದು ಬಿಡುಗಡೆ ಮಾಡಿರುವ ತನ್ನ ಪ್ರಣಾಳಿಕೆಯಲ್ಲಿ, ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿ

ಗಳಿಗೆ ಶಿಷ್ಯವೇತನ ಹಾಗೂ ಹಾಸ್ಟೆಲ್‌ ಸೌಲಭ್ಯ ನೀಡುವುದಾಗಿ ಘೋಷಿಸಿದ್ದು, ಇದು ಧರ್ಮಾಧಾರಿತ ಮತ ಯಾಚನೆಯಾಗಿದೆ. ಕೂಡಲೇ ಪ್ರಣಾಳಿಕೆಯಲ್ಲಿನ ಈ ಅಂಶವನ್ನು ತೆಗೆದುಹಾಕಲು ಪಕ್ಷಕ್ಕೆ ಸೂಚಿಸಬೇಕು ಎಂದು ಮುತಾಲಿಕ್‌ ಅರ್ಜಿಯಲ್ಲಿ ಕೋರಿದ್ದರು.

ಅರ್ಜಿಯ ವಿಚಾರಣೆ ನಡೆಸುವಲ್ಲಿ ಆಸಕ್ತಿ ಇಲ್ಲ. ಚುನಾವಣೆ ಪ್ರಕ್ರಿಯೆ ನಂತರ ಶಾಸನಬದ್ಧ ಪರಿಹಾರ ಕೋರಬಹುದು ಎಂದು ನ್ಯಾಯಪೀಠ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry