ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆನಾ ಫರ್ನಾಂಡಿಸ್‌ ಸಹಾಯಕ ರೆಫರಿ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಫ್ರಾನ್ಸ್‌ನಲ್ಲಿ ನಡೆಯಲಿರುವ 20 ವರ್ಷದೊಳಗಿನವರ ಮಹಿಳೆಯರ ಫಿಫಾ ವಿಶ್ವಕಪ್‌ನಲ್ಲಿ ಸಹಾಯಕ ರೆಫರಿಯಾಗಿ ಕಾರ್ಯನಿರ್ವಹಿಸಲು ಭಾರತದ ವೆನಾ ಫರ್ನಾಂಡಿಸ್‌ ಅವರನ್ನು ಆಯ್ಕೆ ಮಾಡಲಾಗಿದೆ.

‘17 ವರ್ಷದೊಳಗಿನವರ ಮಹಿಳೆಯರ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಸಹಾಯಕ ರೆಫರಿಯಾಗಿ ಕೆಲಸ ಮಾಡಿದ್ದೆ.  ಕೇವಲ ಎರಡೇ ವರ್ಷದೊಳಗೆ ಮತ್ತೊಂದು ಫಿಫಾ ವಿಶ್ವಕಪ್‌ನಲ್ಲಿ ಅವಕಾಶ ಸಿಕ್ಕಿದೆ. ಮತ್ತೊಂದು ಕನಸು ನನಸಾಗಿದೆ’ ಎಂದು ವೆನಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ಇದು ನನಗಷ್ಟೆ ಅಲ್ಲದೇ ಮಹಿಳೆಯರ ಫುಟ್‌ಬಾಲ್‌ ಹಾಗೂ ನನ್ನಂತೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ತೀರ್ಪುಗಾರರಿಗೆ ಸಿಕ್ಕ ಗೌರವ. ಭಾರತದ ಮಹಿಳೆಯರಿಗೂ ವಿಶ್ವಮಟ್ಟದ ಪಂದ್ಯಗಳಲ್ಲಿ ರೆಫರಿಯಾಗುವ ಸಾಮರ್ಥ್ಯವಿದೆ ಎಂದು ಇದರಿಂದ ಗೊತ್ತಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಭಾರತದ ಮಹಿಳಾ ತೀರ್ಪುಗಾರರಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಹಿಳಾ ರೆಫರಿಗಳಿಗೆ ಮನ್ನಣೆ ಸಿಗುತ್ತಿರುವುದರಿಂದ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿದೆ’ ಎಂದು ಎಐಎಫ್‌ಎಫ್‌ನ ಪ್ರಧಾನ ಕಾರ್ಯದರ್ಶಿ ಕುಶಾಲ್‌ ದಾಸ್‌ ಹೇಳಿದ್ದಾರೆ.

2016ರಲ್ಲಿ 17 ವರ್ಷದೊಳಗಿನವರ ಫುಟ್‌ಬಾಲ್‌ ವಿಶ್ವಕಪ್‌ನ ಫೈನಲ್‌ ಸೇರಿದಂತೆ ಒಟ್ಟು 5 ಪಂದ್ಯಗಳಲ್ಲಿ ವೆನಾ ಅವರು ಸಹಾಯಕ ರೆಫರಿಯಾಗಿ ಕೆಲಸ ಮಾಡಿದ್ದರು. ಫೈನಲ್‌ ಪಂದ್ಯದಲ್ಲಿನ ಕಾರ್ಯಕ್ಕೆ ಅವರಿಗೆ ಎಎಫ್‌ಸಿ ಕೊಡುವ ‘ರೆಫರೀಸ್‌ ವಿಶೇಷ’ ಪ್ರಶಸ್ತಿ ಲಭಿಸಿತ್ತು.

20 ವರ್ಷದೊಳಗಿನವರ ಮಹಿಳೆಯರ ಫಿಫಾ ವಿಶ್ವಕಪ್‌ ಆಗಸ್ಟ್‌ 5ರಿಂದ 24ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT