ಅಫ್ಗನ್‌–ಬಾಂಗ್ಲಾ ಕ್ರಿಕೆಟ್‌ ಸರಣಿ

7

ಅಫ್ಗನ್‌–ಬಾಂಗ್ಲಾ ಕ್ರಿಕೆಟ್‌ ಸರಣಿ

Published:
Updated:

ನವದೆಹಲಿ: ಅಫ್ಗಾನಿಸ್ತಾನ ತಂಡ ಮುಂದಿನ ತಿಂಗಳು ಬಾಂಗ್ಲಾ ದೇಶದ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ–20 ಕ್ರಿಕೆಟ್‌ ಸರಣಿ ಆಡಲಿದೆ.

ಸರಣಿಯ ಪಂದ್ಯಗಳು ಜೂನ್ 3, 5 ಮತ್ತು 7ರಂದು ಭಾರತದ ಡೆಹ್ರಾಡೂನ್‌ನಲ್ಲಿರುವ ಕ್ರೀಡಾಂಗಣದಲ್ಲಿ ಜರುಗಲಿವೆ.

‘ನಮ್ಮ ತಂಡ ಮುಂದಿನ ತಿಂಗಳು ಬಾಂಗ್ಲಾದೇಶದ ವಿರುದ್ಧ ಮೂರು ಪಂದ್ಯಗಳ ಟ್ವೆಂಟಿ–20 ಸರಣಿ ಆಡಲಿದೆ. 2020ರ ವಿಶ್ವ ಟ್ವೆಂಟಿ–20 ಟೂರ್ನಿಗೂ ಮುನ್ನ ಐಸಿಸಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಸ್ಥಾನ ಉತ್ತಮಪಡಿಸಿಕೊಳ್ಳಲು ಎರಡೂ ತಂಡಗಳಿಗೂ ಈ ಸರಣಿ ನೆರವಾಗಲಿದೆ’ ಎಂದು ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿಯ (ಎಸಿಬಿ) ಮುಖ್ಯಸ್ಥ ಅತೀಫ್‌ ಮಶಾಲ್‌ ತಿಳಿಸಿದ್ದಾರೆ.

‘ಅಫ್ಗಾನಿಸ್ತಾನ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಡೆಹ್ರಾ ಡೂನ್‌ನ ಕ್ರೀಡಾಂಗಣ ಅಫ್ಗನ್‌ ತಂಡದ ತವರಿನ ಅಂಗಳವಾಗಿದೆ. 2015 ರಿಂದಲೂ ಅವರು ಅಲ್ಲಿ ಪಂದ್ಯಗಳನ್ನು ಆಡುತ್ತಿದ್ದಾರೆ. ಹೀಗಾಗಿ ನಮ್ಮ ತಂಡಕ್ಕೆ ಕಠಿಣ ಸ್ಪರ್ಧೆ ಎದುರಾಗಬಹುದು’ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡ ಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಿಜಾಮುದ್ದೀನ್‌ ಚೌಧರಿ ಹೇಳಿದ್ದಾರೆ.

ಅಫ್ಗಾನಿಸ್ತಾನ ಜೂನ್‌ 14ರಿಂದ ಬೆಂಗಳೂರಿನಲ್ಲಿ ನಡೆಯುವ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಸೆಣಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry