ಹಿರಿಯ ಕ್ರಿಕೆಟಿಗ ರಾಜೀಂದರ್‌ ನಿಧನ

7

ಹಿರಿಯ ಕ್ರಿಕೆಟಿಗ ರಾಜೀಂದರ್‌ ನಿಧನ

Published:
Updated:

ನವದೆಹಲಿ: ಹಿರಿಯ ಕ್ರಿಕೆಟಿಗ ರಾಜೀಂದರ್‌ ಪಾಲ್‌ (80) ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಒಬ್ಬ ಮಗಳು ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.

ರಾಜೀಂದರ್‌ ಅವರು 1964ರಲ್ಲಿ ಭಾರತದ ಪರ ಏಕೈಕ ಟೆಸ್ಟ್‌ ಪಂದ್ಯ ಆಡಿದ್ದರು.

1954–55ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅವರು 1959–60ರಲ್ಲಿ ನಡೆದಿದ್ದ ರೈಲ್ವೇಸ್‌ ಎದುರಿನ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ತಂಡದಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಒಟ್ಟು 12 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು.

ಬಲಗೈ ಮಧ್ಯಮವೇಗಿ ಆಗಿದ್ದ ರಾಜೀಂದರ್‌ ಅವರು 1960ರಿಂದ 62ರ ಅವಧಿಯಲ್ಲಿ ನಡೆದಿದ್ದ ವಿವಿಧ ಟೂರ್ನಿಗಳಲ್ಲಿ ದೆಹಲಿ ತಂಡವನ್ನು ಮುನ್ನಡೆಸಿದ್ದರು.

ಒಟ್ಟು 98 ‍ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ಅವರು 21.89ರ ಸರಾಸರಿಯಲ್ಲಿ 337 ವಿಕೆಟ್‌ ಉರುಳಿಸಿದ್ದಾರೆ. ಜೊತೆಗೆ 1040 ರನ್‌ ದಾಖಲಿಸಿದ್ದಾರೆ.

ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ ನಂತರ ಅವರು ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry