7

ವಿನಾಕಾರಣ ಹಲ್ಲೆ: ಆಪ್‌ ಆರೋಪ

Published:
Updated:

ಬೆಂಗಳೂರು: ‘ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಗೂಂಡಾಗಿರಿ ಹೆಚ್ಚಾಗಿದ್ದು, ಆಪ್‌ ಕಾರ್ಯಕರ್ತರ ಮೇಲೆ ವಿನಾಕಾರಣ ಹಲ್ಲೆ ಮಾಡಲಾಗುತ್ತಿದೆ’ ಎಂದು ಆಮ್‌ ಆದ್ಮಿ ಪಕ್ಷದ ಸಂಘಟನಾ ಕಾರ್ಯದರ್ಶಿ ದರ್ಶನ್‌ ಜೈನ್‌ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಸರ್ವಜ್ಞನಗರ, ಕಮ್ಮನಹಳ್ಳಿ, ಹೆಬ್ಬಾಳ, ಮಹದೇವಪುರಗಳಲ್ಲಿ ಆಪ್‌ ಕಾರ್ಯಕರ್ತರ ಮೇಲೆ ಬಿಜೆಪಿಯವರು ಜಟಾಪಟಿಗೆ ಇಳಿದಿದ್ದರು. ಅಲ್ಲದೆ ಕಾಂಗ್ರೆಸ್‌ ಪಕ್ಷದವರು ಕೂಡ ಶಾಂತಿನಗರದಲ್ಲಿ ಆಪ್‌ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ದೂರಿದರು.

‘ಕಾಂಗ್ರೆಸ್‌ನದ್ದು ಗೂಂಡಾಗಿರಿಯಷ್ಟೇ ಅಲ್ಲ, ಸಂವಿಧಾನ ಉಳಿಸಿ ಎನ್ನುವ ಮೂಲಕ ಜನರ ಮತ ಸೆಳೆಯಲು ಡ್ರಾಮಾ ಕಂಪನಿಯನ್ನೂ ಶುರು ಮಾಡಿಕೊಂಡಿದೆ. ಇದು ಕಾಂಗ್ರೆಸ್‌ ಬಚಾವೊ ತಂತ್ರದಂತೆ ಕಾಣುತ್ತದೆ’ ಎಂದು ವ್ಯಂಗ್ಯವಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry