ನವಯುಗದ ಜಾದೂಗಾರ ಮೆಸೆಂಜರ್‌

7

ನವಯುಗದ ಜಾದೂಗಾರ ಮೆಸೆಂಜರ್‌

Published:
Updated:
ನವಯುಗದ ಜಾದೂಗಾರ ಮೆಸೆಂಜರ್‌

ನಮ್ಮೊಂದಿಗೆ ಓದಿದ ಸ್ನೇಹಿತರು, ನೆರೆಯವರು ಪರಿಚಯಸ್ಥರು, ಹಿತೈಷಿಗಳು, ದೂರದ ಬಂಧುಗಳು ಜೀವನದ ವೇಗಕ್ಕೆ ಸಿಲುಕಿ ಅಪರಿಚಿತರ ಪಟ್ಟಿಗೆ ಸೇರಿಬಿಡುವುದುಂಟು. ಡಿಜಿಟಲ್ ಮಾಧ್ಯಮದ ಸಹಾಯದಿಂದ ಅವರನ್ನು ಮತ್ತೊಮ್ಮೆ ನಮಗೆ ಪರಿಚಯ ಮಾಡಿದ ಶ್ರೇಯಸ್ಸು ಸಾಮಾಜಿಕ ಮಾಧ್ಯಮಗಳಿಗೆ ಸಲ್ಲುತ್ತದೆ.

ಪ್ರೀತಿಪಾತ್ರರೊಂದಿಗೆ ನಿರಂತರ ಸಂಪರ್ಕಕ್ಕೆ ನೆರವಾಗಿದ್ದ ಪತ್ರಗಳಿಗೆ ಹೊಸ ವಿನ್ಯಾಸ ನೀಡಿ ಡಿಜಿಟಲ್ ಮಾಧ್ಯಮಗಳ ಮೂಲಕ ವೇಗಧೂತನಾಗಿ ಈ ಸಾಮಾಜಿಕ ಮಾಧ್ಯಮಗಳು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗಿದ್ದವು.

ಇದೇ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಮೆಸೆಂಜರ್,  ಈಗ ಸಂದೇಶ ಕಳುಹಿಸುವ ಮೂಲ ಸ್ವರೂಪವನ್ನೇ ಬದಲಿಸಲು ಮೊದಲ ಹೆಜ್ಜೆ ಇಟ್ಟಿದ್ದು, ಸಂದೇಶ ಅಕ್ಷರ, ಎಮೋಜಿ, ಫೋಟೊಗಳನ್ನು ಮಾತ್ರ ಕಳುಹಿಸಲು ಅವಕಾಶವಿದ್ದ ಮೆಸೆಂಜರ್‌ ಆ್ಯಪ್‌ನಲ್ಲಿ ಈಗ ಗುಣಮಟ್ಟದ ವಿಡಿಯೊಗಳನ್ನು ಕಳುಹಿಸಲು, ಹಂಚಿಕೊಳ್ಳಲು ಸಾಧ್ಯವಾಗುವಂತೆ ಮರು

ವಿನ್ಯಾಸಗೊಳಿಸಲಾಗಿದೆ.

360 ಡಿಗ್ರಿ ಕೋನದಲ್ಲಿ ಫೋಟೊ

ಕೇವಲ ಫೋಟೊ ವಿಡಿಯೊ ಮಾತ್ರವಲ್ಲ 360 ಡಿಗ್ರಿಯಲ್ಲಿ ನಿಮ್ಮವರ ಪೋಟೊಗಳನ್ನು ನೋಡಬಹುದು. ಸಾಮಾನ್ಯವಾಗಿ ಒಂದು ಫೋಟೊ ಸಾವಿರ ಪದಗಳಿಗೆ ಸಮ ಎಂದು ಕರೆಯುತ್ತಾರೆ. ಆದರೆ ಅದೇ ಫೋಟೊವನ್ನು ನೋಡುವ ಕೋನವೇ ಬದಲಾದಾಗ ಬರೀ ಕಣ್ಣಿಗೆ ಕಾಣುವ ದೃಶ್ಯಗಳನ್ನು ಹೊರತು ಪಡಿಸಿ ಮೆರಗು ಹೆಚ್ಚಿಸುವ ಸೌಂದರ್ಯವನ್ನು ಕಣ್ತುಂಬಿಕೊಳ್ಳುವಂತೆ 360  ಡಿಗ್ರಿ ಪನೋರಮ ಪೋಟೊದಲ್ಲಿ ಸಾಧ್ಯವಾಗಲಿದೆ.

ಶೇರ್ ಮಾಡಿ ಖುಷಿ ಪಡಿ

ನಿಮ್ಮ ತುಂಟಾಟ, ಮಗುವಿನ ಮುಗುಳುನಗೆ, ಪ್ರೇಯಸಿಯ ಸವಿ ಮಾತು, ಈ ಎಲ್ಲ ಸನ್ನಿವೇಶವನ್ನು ಹೈ ಕ್ವಾಲಿಟಿ (720 ಪಿಕ್ಸೆಲ್‌) ವಿಡಿಯೊ ತುಣುಕಾಗಿ ಚಿತ್ರೀಕರಿಸಿ, ಮೆಸೆಂಜರ್  ಮೂಲಕ ವಿಡಿಯೊ ಸಂದೇಶ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.

ಬಳಸೋದು ಹೇಗೆ?

ಮೆಸೆಂಜರ್‌ ಆ್ಯಪ್‌ ಓಪನ್ ಮಾಡಿದ ತಕ್ಷಣ ಅಲ್ಲಿ ಕಾಣುವ ಕ್ಯಾಮೆರಾ ಐಕಾನ್ ಮೇಲೆ ಒತ್ತಿ. ಅದು ನಿಮ್ಮ ಮೊಬೈಲ್ ಕ್ಯಾಮೆರಾಗೆ ಕರೆದೊಯ್ಯುತ್ತದೆ. ಅದರಲ್ಲಿರುವ ಪನೋರಮ ಸೂಚನೆ ಆಯ್ಕೆ ಮಾಡಿಕೊಂಡು, ವಿಡಿಯೊ ಅಥವಾ ಫೋಟೊ ಕ್ಲಿಕ್ಕಿಸಿದರೆ ಸಾಕು. ಆ ಫೈಲ್ ಮೆಸೆಂಜರ್ ಮೂಲಕ ಶೇರ್ ಮಾಡಲು ಸಿದ್ಧಗೊಳ್ಳುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry