ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಖೀ ಮತ ಕೇಂದ್ರಕ್ಕೆ ಸಿಇಒ ಅಶ್ವತಿ ಭೇಟಿ

Last Updated 11 ಮೇ 2018, 5:54 IST
ಅಕ್ಷರ ಗಾತ್ರ

ಉಚ್ಚಂಗಿದುರ್ಗ: ಮೇ 12ರ ವಿಧಾನಸಭೆ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹರಪನಹಳ್ಳಿ ಹಾಗೂ ಉಚ್ಚಂಗಿದುರ್ಗದ ಎರಡು ಕಡೆ ಪಿಂಕ್ ಮತಗಟ್ಟೆಗಳು ಸಿದ್ದಗೊಂಡಿದೆ.

ಹರಪನಹಳ್ಳಿ ಪಟ್ಟಣದ ಕೃಷಿ ಇಲಾಖೆ ಕೊಠಡಿ ಹಾಗೂ ಉಚ್ಚಂಗಿದುರ್ಗ ಹೊಸ ಗ್ರಾಮ ಪಂಚಾಯ್ತಿ ಕಟ್ಟಡಗಳು ಪಿಂಕ್ (ಸಖಿ) ಮತಗಟ್ಟೆಯಾಗಿ ಮಾರ್ಪಾಡಾಗಿವೆ.

ಇಡೀ ಮತಗಟ್ಟೆಗೆ ತಿಳಿ ಗುಲಾಬಿ (ಪಿಂಕ್) ಬಣ್ಣದ ಬಟ್ಟೆ ಜೋಡಿಸಲಾಗಿದ್ದು ಕಂಗೊಳಿಸುತ್ತಿವೆ. ಕಟ್ಟಡ ಮುಂಭಾಗವೂ ಪಿಂಕ್ ಬಣ್ಣದ ಬಟ್ಟೆ ಕಟ್ಟಲಾಗಿದೆ. ಗಿಡ, ಮರಗಳ ನಡುವೆ ಕಟ್ಟಲಾಗಿರುವ ತಿಳಿಕೆಂಪು ಬಣ್ಣದ ಬಟ್ಟೆಗಳು ಜನರನ್ನು ಆಕರ್ಷಿಸುತ್ತಿವೆ. ಎರಡು ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುವರು.

ಜಗಳೂರು ವಿದಾನಸಭಾ ಕ್ಷೇತ್ರ (103) ವ್ಯಾಪ್ತಿಗೆ ಒಳಪಡುವ ತಾಲ್ಲೂಕಿನ ಉಚ್ಚಂಗಿದುರ್ಗ ಮತಗಟ್ಟೆ ಸಂಖ್ಯೆ 101ರಲ್ಲಿ ಒಟ್ಟು 661 ಮತದಾರರು ಮತ ಚಲಾಯಿಸಲಿದ್ದಾರೆ. ಪುರುಷರು-332, ಮಹಿಳೆಯರು-329 ಸಂಖ್ಯೆಯಲ್ಲಿದ್ದಾರೆ.

ಹರಪನಹಳ್ಳಿ ವಿಧಾನಸಭಾ ಕ್ಷೇತ್ರ (104)ರ ಕೃಷಿ ಇಲಾಖೆ ಮತಗಟ್ಟೆ ಸಂಖ್ಯೆ 99 ಪಿಂಕ್ ಮತಗಟ್ಟೆಯಾಗಿ ಸಿದ್ದಗೊಂಡಿದೆ. ಒಟ್ಟು 1239 ಮತದಾರರಿದ್ದು, ಆ ಪೈಕಿ ಪುರುಷರು-637 ಮತ್ತು ಮಹಿಳೆಯರು-602 ಜನರು ಮತ ಚಲಾಯಿಸುವರು. ಇಲಾಖೆ ಸಭಾಂಗಣದಲ್ಲಿ ಕೊಠಡಿಯ ಗೋಡೆ, ಕಿಟಕಿ ಹಾಗೂ ಹೊರಾಂಗಣದಲ್ಲಿ ಮತದಾರರನ್ನು ಆಕರ್ಷಿಸಲು ಬಣ್ಣದ ಬಟ್ಟೆಗಳನ್ನು ಕಟ್ಟಲಾಗಿದೆ.

ಈ ಮತಗಟ್ಟೆಗೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಪೊಲೀಸರು ಸೇರಿದಂತೆ ಎಲ್ಲ ಐವರು ಮಹಿಳಾ ಸಿಬ್ಬಂದಿಗಳಿರುವರು. ಮತದಾನದ ಬಗ್ಗೆ ತಾತ್ಸಾರ ಹೊಂದುವ ಮಹಿಳೆಯರನ್ನು ಆಕರ್ಷಿಸಿ, ಆ ಮೂಲಕ ಮಹಿಳಾ ಸಶಸ್ತ್ರೀಕರಣದ ದೃಷ್ಟಿಯಿಂದ ಮತಗಟ್ಟೆ ಗಮನ ಸೆಳೆಯಲಿದೆ ಎನ್ನುತ್ತಾರೆ ಚುನಾವಣಾಧಿಕಾರಿ ರವೀಂದ್ರ ಕರಲಿಂಗಣ್ಣನವರ್.

ಮಹಿಳೆಯರು ನಿರ್ಭಯದಿಂದ ಮತ ಚಲಾಯಿಸಲು, ಕೇಂದ್ರದಲ್ಲಿ ಉತ್ತಮ ವಾತಾವರಣ ಕಲ್ಪಿಸಲು ಅನೇಕ ಸವಲತ್ತು ಒದಗಿಸಲಾಗಿದೆ. ಮುಖ್ಯವಾಗಿ ಮಹಿಳೆಯರಿಗೆ ಸ್ವಾತಂತ್ರ್ಯ ಹಾಗೂ ಮಹಿಳಾ ಸ್ನೇಹ ಮತಗಟ್ಟೆಗಾಗಿ ಕೇಂದ್ರದ ಹೊರಗೆ ಸೆಲ್ಫಿ ಸಖಿ ಕೃತಕ ಬಾಕ್ಸ್ ನಿರ್ಮಿಸಿದ್ದಾರೆ. ತಮ್ಮ ಹಕ್ಕು ಚಲಾಯಿಸಲು ಆಗಮಿಸಿದ ಮಹಿಳೆಯರು ಅದರೊಳಗೆ ನಿಂತು ಖುಷಿಯಾಗಿ ಸೆಲ್ಪಿ ಫೋಟೊ ಕ್ಲಿಕ್ಕಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT