ಕಡೆಯ ದಿನ ಅಬ್ಬರದ ಪ್ರಚಾರ

7

ಕಡೆಯ ದಿನ ಅಬ್ಬರದ ಪ್ರಚಾರ

Published:
Updated:

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯ ಪ್ರಚಾರದ ಕಡೆಯ ದಿನವಾದ ಗುರುವಾರ ವಿವಿಧ ಪಕ್ಷಗಳ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದರು.

ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ ಗೋಕಾಕ ದುರ್ಗದ ಬೈಲ್‌, ಬಂಕಾಪುರ ಓಣಿ ಮುಂತಾದೆಡೆ ರ‍್ಯಾಲಿ ನಡೆಸಿದರು. ಮುಖಂಡರಾದ ಶಿವು ಮೆಣಸಿನಕಾಯಿ, ಶಿವಾನಂದ ಮುತ್ತಣ್ಣನವರ, ಡಿ.ಕೆ. ಚವ್ಹಾಣ, ಮಹೇಶ ಟೆಂಗಿನಕಾಯಿ ಇದ್ದರು.

ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಣ್ಣ ಕೊರವಿ ಅವರೂ ಜೆ.ಕೆ.ಶಾಲೆ, ಮಹದೇವನಗರ, ನಾಗಶೆಟ್ಟಿಕೊಪ್ಪ ಮುಂತಾದೆಡೆ ರ‍್ಯಾಲಿ ನಡೆಸಿದರು. ಸಿದ್ಧಾರೂಢ ಮಠದಲ್ಲಿ ಪೂಜೆ ಸಲ್ಲಿಸಿದರು. ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್‌ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದರು.

ಇದೇ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಹೇಶ ನಾಲವಾಡ ಉಣಕಲ್‌ ಭಾಗದಲ್ಲಿ ಪ್ರಚಾರ ನಡೆಸಿದರು. ಸೆಂಟ್ರಲ್ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಸಂತೋಷ ನರಗುಂದ ಹೊಸೂರಿನ ವಿಕಾಸನಗರದಲ್ಲಿ ಪ್ರಚಾರ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry