ಸಾಮಾಜಿಕ ನ್ಯಾಯವೇ ಧ್ಯೇಯ: ಎಂ.ವೈ.ಪಾಟೀಲ

7

ಸಾಮಾಜಿಕ ನ್ಯಾಯವೇ ಧ್ಯೇಯ: ಎಂ.ವೈ.ಪಾಟೀಲ

Published:
Updated:

ಅಫಜಲಪುರ: ‘ತಾಲ್ಲೂಕಿನಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದೆ. ಎಲ್ಲಾ ಸಮಾಜದವರು ನನ್ನ ಗೆಲುವಿಗೆ ಟೊಂಕ ಕಟ್ಟಿ ನಿಲ್ಲುತ್ತಿದ್ದಾರೆ‘ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ವೈ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಗುರುವಾರ ಬೈಕ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಟ್ಟವನು ಮತ್ತು ಅದರಂತೆ ಮಾಡಿ ತೋರಿಸಿದ್ದೇನೆ. ಪ್ರತಿಯೊಂದು ಸಮಾಜದವರಿಗೂ ರಾಜಕೀಯ ಸ್ಥಾನಮಾನ ನೀಡಿದ್ದೇನೆ. 2 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಸಹ ತಮ್ಮ ಆಶೀರ್ವಾದದಿಂದ ಶಾಸಕನಾಗಿ ಅಫಜಲಪುರ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇನೆ’ ಎಂದರು.‌

ಮುಖಂಡರಾದ ಶಿವಪುತ್ರಪ್ಪ ಸಂಗೋಳಗಿ, ಮತೀನ ಪಟೇಲ, ಚಂದ್ರ ಶೇಖರ ಕರಜಗಿ, ಪಪ್ಪು ಪಟೇಲ,

ಸಂಜೀವ ನಿಂಬಾಳ, ಸಿದ್ದ ರಾಮಪ್ಪ ಗಣಾಚಾರಿ, ಜಿ.ಪಂ ಸದಸ್ಯ ಅರುಣಕುಮಾರ ಎಂ. ಪಾಟೀಲ, ಸಿದ್ಧಾರ್ಥ ಬಸರಗಿಡದ, ಪ್ರಕಾಶ ಜಮಾದಾರ, ಮಹಾದೇವ ಕಲಕೇರಿ, ಬಿಲ್ಲಂರಾಜಾ ಮ್ಯಾಳೇಸಿ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry