ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಮತದಾನಕ್ಕೆ ಸಕಲ ಸಿದ್ಧತೆ

ಚಂದಾಪುರದಲ್ಲಿ ಪಿಂಕ್‌ ಮತಗಟ್ಟೆ ನಿರ್ಮಾಣ
Last Updated 11 ಮೇ 2018, 6:29 IST
ಅಕ್ಷರ ಗಾತ್ರ

ಚಿಂಚೋಳಿ: ವಿಧಾನಸಭೆ ಚುನಾವಣೆಯ ಮತದಾನಕ್ಕೆ ತಾಲ್ಲೂಕಿನಲ್ಲಿ ಅಗತ್ಯ ಸಿದ್ಧತೆ ಪೂರ್ಣಗೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಸಂತೋಷ ಸಪ್ಪಂಡಿ ತಿಳಿಸಿದ್ದಾರೆ.

ಪ್ರಜಾವಾಣಿ ಜತೆಗೆ ಮಾತನಾಡಿದ ಅವರು, ‘ಚಿಂಚೋಳಿಯ ಪುರಸಭೆ ವ್ಯಾಪ್ತಿಯ ಚಂದಾಪುರ ಸರ್ಕಾರಿ ಪಿಯು ಕಾಲೇಜಿನ ಮತಗಟ್ಟೆಯಲ್ಲಿ ಪುರುಷರಿಗಿಂತಲೂ ಮೂವರು ಮಹಿಳಾ ಮತದಾರರು ಹೆಚ್ಚಾಗಿದ್ದರಿಂದ ಇಲ್ಲಿ ಪಿಂಕ್‌ ಮತಗಟ್ಟೆ ಸ್ಥಾಪಿಸಲಾಗಿದೆ. ಮತಗಟ್ಟೆಯ ಕೊಠಡಿ, ಕಿಟಕಿ, ಬಾಗಿಲು ಗಳಿಗೆ ಪಿಂಕ್‌ ಬಣ್ಣ ಬಳಿಯಲಾಗಿದೆ. ಜತೆಗೆ ಮತಗಟ್ಟೆಯ ಕೊಠಡಿ ಒಳಗಡೆ ಕರ್ಟನ್‌ ಅಳವಡಿಸಬೇಕಿದ್ದು ಮತದಾರರ ಸ್ವಾಗತಕ್ಕೆ ಮಹಾದ್ವಾರ ಮತ್ತು ಮತದಾನದ ಮಹತ್ವ ತಿಳಿಸುವ ವಿವಿಧ ಪಲಕ ಅಳವಡಿಸಲಾಗುವುದು ಎಂದರು.

‘459 ಮಹಿಳೆಯರು, 456 ಪುರುಷರು ಸೇರಿ ಒಟ್ಟು 915 ಮತದಾರರು ಇದ್ದಾರೆ. ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕರೆದೊಯ್ಯಲು 29 ಈಶಾನ್ಯ ಸಾರಿಗೆ ಸಂಸ್ಥೆ ಬಸ್‌, 82 ಜೀಪ್‌ ಬಳಸಿಕೊಳ್ಳಲಾಗುತ್ತಿದೆ. ನಡೆಯಲು ತೊಂದರೆ ಎದುರಿಸುವ ಅಂಗವಿಲಕರಿಗೆ ತ್ರಿಚಕ್ರ ಖುರ್ಚಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ತುಮಕುಂಟಾ ಮತಗಟ್ಟೆಯನ್ನು ಗುರುತಿಸಲಾಗಿದೆ. ತಾಲ್ಲೂಕಿನಲ್ಲಿ 24 ತ್ರಿಚಕ್ರ ಕುರ್ಚಿಗಳಿವೆ’ ಎಂದರು.

‘ದೃಷ್ಟಿದೋಷ ಉಳ್ಳವರಿಗೆ ಮ್ಯಾಗ್ನಿಫೈಯಿಂಗ್‌ ಗ್ಲಾಸ್‌ ವ್ಯವಸ್ಥೆ ಮಾಡಲು ಚಿಂತನೆ ನಡೆದಿದೆ. ಮತಗಟ್ಟೆಯ ಕಟ್ಟಡಕ್ಕೆ ಕಾರಿಡಾರ್‌ ಇಲ್ಲದ ಕಡೆ ಶಾಮಿಯಾನ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ಮತಗಟ್ಟೆಯಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಮತ್ತು ಬಿಸಿ ಊಟದ ಸಿಬ್ಬಂದಿಯಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

241 ಮತಗಟ್ಟೆಗಳಿದ್ದು, 1,475 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ ಡಿ ಗ್ರೂಪ್‌ನ 260 ಸೇರಿ
ಒಟ್ಟು 1,735 ಸಿಬ್ಬಂದಿಯ ಸೇವೆ ಬಳಸಿಕೊಳ್ಳಲಾಗುತ್ತಿದೆ. ಪ್ರತಿ ಮತಗಟ್ಟೆಯಲ್ಲಿ ಪ್ರಥಮ ಚಿಕಿತ್ಸೆಯ ಔಷಧ ಕಿಟ್‌ ಮತ್ತು ಓಆರ್‌ಎಸ್‌ ಪ್ಯಾಕೇಟ್‌ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಹೆಚ್ಚುವರಿ ಸೇರಿ 300 ಮತಯಂತ್ರಗಳು ಹಾಗೂ ವಿವಿಪ್ಯಾಟ್‌ ಬಳಸಿಕೊಳ್ಳಲಾಗುವುದು ಎಂದರು.ಅಂಚೆ ಮತಪತ್ರ: ಮತಕ್ಷೇತ್ರದಲ್ಲಿ ಒಟ್ಟು 699 ಅಂಚೆ ಮತಪತ್ರಗಳು ವಿತರಿಸಲಾಗಿದ್ದು, ಈಗಾಗಲೇ 322 ಮತದಾರರು ಮತದಾನ ಮಾಡಿದ್ದಾರೆ. ಕೆಲವರಿಗೆ 179 ಜನರಿಗೆ ಅಂಚೆಯಿಂದ ಮತಪತ್ರ ಕಳುಹಿಸಿ ಕೊಡಲಾಗಿದೆ ಎಂದು ವಿವರಿಸಿದರು.

**
ತಾಲ್ಲೂಕಿನ ಶಾಂತಿ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ 600 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆಗ ಆಸ್ಪದವಿಲ್ಲ
- ಯು.ಶರಣಪ್ಪ, ಡಿವೈಎಸ್ಪಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT