ಜನರ ಹಕ್ಕುಗಳಿಗಾಗಿ ಎಸ್‌ಡಿಪಿಐ ಹೋರಾಟ

7
ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ

ಜನರ ಹಕ್ಕುಗಳಿಗಾಗಿ ಎಸ್‌ಡಿಪಿಐ ಹೋರಾಟ

Published:
Updated:

ಮೈಸೂರು: ನರಸಿಂಹರಾಜ ವಿಧಾನ ಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ಪರವಾಗಿ ಪ್ರಚಾರ ಸಭೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್‌ ಮಹಮ್ಮದ್‌, ‘ನಮ್ಮೆಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿರುವ ಸಂವಿಧಾನವನ್ನು ಬದಲಿ ಸಲು ಹೊರಟಿರುವ ಶಕ್ತಿ ಇಂದು ದೇಶವನ್ನು ಆಳುತ್ತಿದೆ. ಮುಸ್ಲಿಂ, ದಲಿತ, ಕ್ರೈಸ್ತ, ಆದಿವಾಸಿ, ಹಿಂದುಳಿದ ವರ್ಗದವರನ್ನು ಹೀನಾಯವಾಗಿ ಅವಮಾನಿಸಲಾಗುತ್ತಿದೆ’ ಎಂದರು.

ಎಸ್‌ಡಿಪಿಐ ಜನರ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುತ್ತಿದೆ. ಮಜೀದ್‌ ಈ ಬಾರಿ ಆಯ್ಕೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ‘ಮಜೀದ್‌ ಅವರು ಡಾ.ಬಿ.ಆರ್.ಅಂಬೇಡ್ಕರ್‌, ಬಸವಣ್ಣ ಅವರ ಚಿಂತನೆಗಳನ್ನು ಮೈಗೂಡಿಸಿ ಕೊಂಡಿ ದ್ದಾರೆ. ಅವರೊಳಗೊಬ್ಬ ಟಿಪ್ಪು ಸುಲ್ತಾನ್‌, ಎಲ್ಲ ಸಮುದಾಯಗಳ ಪರ ಇರುವ ನ್ಯಾಯಧೀಶ ಇದ್ದಾನೆ’ ಎಂದರು.

ಮೌಲಾನಾ ಅಯ್ಯೂನ್ ಅನ್ಸಾರಿ, ಕಬೀರ್ ಮಠದ ಸತ್ಯನಾರಾಯಣ ಸ್ವಾಮೀಜಿ, ಅಲ್ಪಾನ್ಸೋ ಪ್ರಾಂಕೋ, ಅಬ್ದುಲ್‌ ಅಜೀಜ್‌ ಅಜ್ಜು, ಅಬ್ದುಲ್‌ ಉನ್ನಾನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry