ಶನಿವಾರ, ಮಾರ್ಚ್ 6, 2021
18 °C

ನಟನೆಗೆ ವಾಪಸ್ ಕರೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟನೆಗೆ ವಾಪಸ್ ಕರೀನಾ

ಇದು 2016ರಲ್ಲಿಯೇ ಸೈನ್‌ ಮಾಡಿದ್ದ ಚಿತ್ರ. ಆದರೆ ಆಗ ನನಗೆ ಗೊತ್ತಿರಲಿಲ್ಲ ನಾನು ಗರ್ಭಿಣಿಯೆಂದು. ಗೊತ್ತಾದ ಕೂಡಲೇ ನಿರ್ದೇಶಕಿ ರಿಹಾ ಕಪೂರ್‌ಗೆ ಕರೆ ಮಾಡಿ ತಿಳಿಸಿದ್ದೆ. ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಆಗಿನ್ನೂ ಚಿತ್ರೀಕರಣವೂ ಆರಂಭವಾಗಿರಲಿಲ್ಲ. ಈ ಪಾತ್ರಕ್ಕೆ ಬೇರೆ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಿ ಎಂದು.

ರಿಹಾ ಮಾತ್ರ, ಒಂದಷ್ಟು ದಿನ ಕಾಯೋಣ ಎಂದು ಹೇಳಿದ್ದರು. ಗರ್ಭಾವಸ್ಥೆ ನಿರಾತಂಕವಾಗಿ ಮುಗಿಯಿತು. ತೈಮೂರ್‌ ಹುಟ್ಟಿದ. ಅವನಿಗೊಂದು ವರ್ಷ ಆಯಿತು. ನಾನೂ ತಾಯ್ತನವನ್ನು ಆನಂದಿಸುತ್ತಿದ್ದೆ. ಆದರೆ ಸೈಫ್‌ ನೆನಪಿಸಿದರು. ಸಾಕಿನ್ನು ವಿರಾಮ.. ಕೆಲಸಕ್ಕೆ ಅಣಿಯಾಗು ಎಂದರು. ಜಿಮ್‌ಗೆ ಹೋಗಲು ಆರಂಭಿಸು. ಫಿಟ್‌ನೆಸ್‌ ಅಗತ್ಯ ಎಂದು ಹೇಳಿದರು. ಮಗುವನ್ನೂ ಜೊತೆಗೆ ಕರೆದೊಯ್ಯಲೂ ಹೇಳಿದರು. ತೈಮೂರ್‌ನೊಂದಿಗೆ ಆಟವಾಡುತ್ತಲೇ ಜಿಮ್‌ಗೆ ಹೋಗಲಾರಂಭಿಸಿದೆ. ಒಂದು ಶಿಸ್ತು ಬಂತು. ರಿಹಾಗೆ ಕರೆ ಮಾಡಿ ತಿಳಿಸಿದೆ.

ಇದೀಗ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಇನ್ನುಮುಂದೆಯೂ  ಚಲನಚಿತ್ರಗಳಲ್ಲಿ ನಟಿಸುವೆ. ವರ್ಷಕ್ಕೆ ಇಂತಿಷ್ಟು, ಅಷ್ಟಿಷ್ಟು ಎಂಬ ಯಾವ ತೀರ್ಮಾನಗಳನ್ನೂ ಕೈಗೊಂಡಿಲ್ಲ. ಒಟ್ಟಿನಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವೆ.

ನಟನೆ ಮತ್ತು ತಾಯ್ತನಗಳೆರಡೂ ಒತ್ತಡವನ್ನು ಹುಟ್ಟುಹಾಕುವುದಿಲ್ಲವೇ? ಎಂಬ ಪ್ರಶ್ನೆ ಕೇಳಬೇಡಿ. ನಾನು ಮತ್ತು ಸೈಫ್‌ ಇಬ್ಬರೂ ಜೀವನವನ್ನು ಹಂಚಿಕೊಂಡಿದ್ದೇವೆ. ಸುಖದುಃಖಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಜವಾಬ್ದಾರಿಗಳನ್ನು ಹಂಚಿಕೊಂಡಿದ್ದೇವೆ. ಇನ್ನು ಒತ್ತಡ ಹಂಚಿಕೊಳ್ಳುದಿಲ್ಲವೇ?

ಈ ದಿನಗಳಲ್ಲಿ ಮನೆ, ಮಕ್ಕಳು ಕೇವಲ ಹೆಣ್ಣುಮಕ್ಕಳ ಜವಾಬ್ದಾರಿಯಾಗಿ ಉಳಿದಿಲ್ಲ. ಸೈಫ್‌ ಎಲ್ಲದಕ್ಕೂ ಸಹಕರಿಸುತ್ತಿದ್ದಾರೆ. ಈ ಪರಂಪರೆ ಇನ್ನು ಹೆಚ್ಚು ಜನಪ್ರಿಯವಾಗುತ್ತದೆ.

ವೀರ್‌ ದೆ ವೆಡ್ಡಿಂಗ್ ಜೂನ್‌ 1ರಂದು ಬಿಡುಗಡೆಯಾಗಲಿದೆ.  ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವೆ. ತೈಮೂರ್‌ಗೆ ಈಗ 16 ತಿಂಗಳು. ಸದ್ಯಕ್ಕೆ ಅವನಿಗೇ ಎಲ್ಲ ಸಮಯ ಮೀಸಲು ಎಂದುಕೊಂಡಿರುವೆ. ಉಳಿದಂತೆ ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಹುದು ಅಷ್ಟೆ’ ಎನ್ನುವ ಕರೀನಾ ತಾಯ್ತನಕ್ಕಾಗಿಯೇ ಈ ಬ್ರೇಕ್‌ ಮೀಸಲು ಎಂದು ಹೇಳುವುದು ಮರೆಯುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.