‘ಇನ್ಫಿ’ಗೆ ವೆಂಕಟೇಶನ್‌ ರಾಜೀನಾಮೆ

7

‘ಇನ್ಫಿ’ಗೆ ವೆಂಕಟೇಶನ್‌ ರಾಜೀನಾಮೆ

Published:
Updated:
‘ಇನ್ಫಿ’ಗೆ ವೆಂಕಟೇಶನ್‌ ರಾಜೀನಾಮೆ

ಬೆಂಗಳೂರು: ಇನ್ಫೊಸಿಸ್‌ನ ಸ್ವತಂತ್ರ ನಿರ್ದೇಶಕ ರವಿ ವೆಂಕಟೇಶನ್‌ ಅವರು ಸಂಸ್ಥೆಯ ನಿರ್ದೇಶಕ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.

ಈ ರಾಜೀನಾಮೆಯು ತಕ್ಷಣದಿಂದಲೇ ಜಾರಿಗೆ ಬಂದಿದೆ. 2011ರಲ್ಲಿ ಇವರು ಇನ್ಫೊಸಿಸ್‌ ಸೇರಿದ್ದರು. ನಂದನ್‌ ನಿಲೇಕಣಿ ಅವರು ಕಾರ್ಯನಿರ್ವಾಹಕಯೇತರ ಅಧ್ಯಕ್ಷರಾಗುವ ಮುಂಚೆ ಇವರು ಅಲ್ಪಾವಧಿವರೆಗೆ ‘ಸಹ ಅಧ್ಯಕ್ಷ’ರಾಗಿ ಕಾರ್ಯನಿರ್ವಹಿಸಿದ್ದರು.

‘ಸಂಸ್ಥೆಯ ಆಡಳಿತ ಮಂಡಳಿಯು ಸ್ಥಾಪಕರ ನಿಯಂತ್ರಣದಿಂದ ವೃತ್ತಿಪರ ನಿರ್ವಾಹಕರಿಗೆ ವರ್ಗಾವಣೆಗೊಳ್ಳುವ ಸವಾಲಿನ ಪಯಣದ ಆರಂಭದಲ್ಲಿ ನಾನು ನಿರ್ದೇಶಕ ಮಂಡಳಿಗೆ ಸೇರ್ಪಡೆಗೊಂಡಿದ್ದೆ. ಆ ದಿನಗಳಲ್ಲಿ ಐ.ಟಿ ಉದ್ದಿಮೆಯು ಬದಲಾವಣೆಯ ವಿಶಿಷ್ಟ ಕಾಲಘಟ್ಟದಲ್ಲಿತ್ತು. ಸಂಸ್ಥೆಯು ಆ ಬದಲಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಸಂಸ್ಥೆಯು ಈಗ ಸಮರ್ಥರ ನಿಯಂತ್ರಣದಲ್ಲಿ ಇದೆ. ಪ್ರಗತಿಯ ಯಶಸ್ಸಿನತ್ತ ದೃಢ ಹೆಜ್ಜೆ ಹಾಕುತ್ತಿದೆ’ ಎಂದು ರವಿ ವೆಂಕಟೇಶನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry