ಮುಬಾಡಾಲ ಟೂರ್ನಿ: ಸೆರೆನಾ ಕಣಕ್ಕೆ

ಲಾಸ್ ಏಂಜಲೀಸ್: ಅಮೆರಿಕದ ಸೆರೆನಾ ವಿಲಿಯಮ್ಸ್, ಡಬ್ಲ್ಯುಟಿಎ ಮುಬಾಡಾಲ ಸಿಲಿಕಾನ್ ವಾಲಿ ಕ್ಲಾಸಿಕ್ ಟೆನಿಸ್ ಟೂರ್ನಿಯಲ್ಲಿ ಆಡಲಿದ್ದಾರೆ. ಈ ಟೂರ್ನಿ ಜುಲೈ 30ರಿಂದ ಆಗಸ್ಟ್ 5ರವರೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿದೆ.
‘ಮುಬಾಡಾಲ ಟೂರ್ನಿಯಲ್ಲಿ ಮರಿಯಾ ಶರಪೋವಾ, ಮ್ಯಾಡಿಸನ್ ಕೀಸ್ ಅವರಂತಹ ಬಲಿಷ್ಠ ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಹೀಗಾಗಿ ಇದರಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದೇನೆ’ ಎಂದು ನುಡಿದಿದ್ದಾರೆ.
ಸೆರೆನಾ, ಗ್ರ್ಯಾನ್‌ಸ್ಲಾಮ್‌ನಲ್ಲಿ ಒಟ್ಟು 23 ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಅವರು ಮ್ಯಾಡ್ರಿಡ್ ಓಪನ್ ಮತ್ತು ಇಟಾಲಿಯನ್ ಓಪನ್ ಟೂರ್ನಿಗಳಿಂದ ಹಿಂದೆ ಸರಿದಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.