ಟೇಬಲ್‌ ಟೆನಿಸ್‌: ಟಿಸ್ಚ್‌ಟೆನಿಸ್‌ ಕ್ಲಬ್‌ ಪರ ಆಡಲಿರುವ ಸತ್ಯನ್‌

7

ಟೇಬಲ್‌ ಟೆನಿಸ್‌: ಟಿಸ್ಚ್‌ಟೆನಿಸ್‌ ಕ್ಲಬ್‌ ಪರ ಆಡಲಿರುವ ಸತ್ಯನ್‌

Published:
Updated:
ಟೇಬಲ್‌ ಟೆನಿಸ್‌: ಟಿಸ್ಚ್‌ಟೆನಿಸ್‌ ಕ್ಲಬ್‌ ಪರ ಆಡಲಿರುವ ಸತ್ಯನ್‌

ಚೆನ್ನೈ: ಭಾರತದ ಜಿ.ಸತ್ಯನ್‌ ಅವರು ಜರ್ಮನ್‌ ಬುಂಡಸ್‌ಲಿಗಾ ಟೂರ್ನಿಯಲ್ಲಿ ಪ್ರತಿಷ್ಠಿತ ಎಎಸ್‌ವಿ ಗ್ರುನ್‌ವೆಟ್ಟೆರ್ಸ್‌ಬಾಕ್‌ ಟಿಸ್ಚ್‌ಟೆನಿಸ್‌ ಕ್ಲಬ್‌ ಪರ ಆಡಲಿದ್ದಾರೆ.

ಈ ಸಂಬಂಧ ಅವರು ಕ್ಲಬ್‌ ಜೊತೆ ಶುಕ್ರವಾರ ಒಪ್ಪಂದ ಮಾಡಿಕೊಂಡಿದ್ದಾರೆ. ಸತ್ಯನ್‌ ಈ ಕ್ಲಬ್‌ ಪರ ಆಡುತ್ತಿರುವ ಭಾರತದ ಎರಡನೇ ಆಟಗಾರ ಆಗಿದ್ದಾರೆ. ಇದಕ್ಕೂ ಮುನ್ನ ಶರತ್‌ ಕಮಲ್‌ ಒಪ್ಪಂದ ಮಾಡಿಕೊಂಡಿದ್ದರು.

ಸತ್ಯನ್‌, ಹೋದ ತಿಂಗಳು ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾ ಕೂಟದ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಪುರುಷರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಜಯಿಸಿದ್ದರು.

‘ಗ್ರುನ್‌ವೆಟ್ಟೆರ್ಸ್‌ಬಾಕ್‌, ವಿಶ್ವದ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದು. ಈ ಕ್ಲಬ್‌ ಪರ ಆಡುವ ಅವಕಾಶ ಸಿಕ್ಕಿರುವುದಕ್ಕೆ ಅತೀವ ಖುಷಿಯಾಗಿದೆ. ಟಿಮೊ ಬಾಲ್‌, ಸಿಮನ್‌ ಗೌಜಿ, ಹ್ಯೂಗೊ ಕಾಲ್ಡೆರಾನೊ ಅವರೂ  ಕ್ಲಬ್‌ನಲ್ಲಿದ್ದಾರೆ. ಅವರಿಂದ ಹೊಸ ತಂತ್ರಗಳನ್ನು ಕಲಿಯಲು ಉತ್ಸುಕನಾಗಿದ್ದೇನೆ’ ಎಂದು ಸತ್ಯನ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry