ಜುಡೊ: ಭಾರತಕ್ಕೆ ಎರಡು ಚಿನ್ನ

7

ಜುಡೊ: ಭಾರತಕ್ಕೆ ಎರಡು ಚಿನ್ನ

Published:
Updated:

ನವದೆಹಲಿ: ಭಾರತದ ರೋಹಿಣಿ ಎಸ್ ಮೊಹಿತೆ ಮತ್ತು ತಬಾಬಿದೇವಿ ತಂಜಾಮ್ ಅವರು ಲೆಬನಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಕೆಡೆಟ್ ಜುಡೊ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾರತದ ಇನ್ನೊಬ್ಬ ಜುಡೊಪಟು ಹರೀಶ್ ಕಂಚಿನ ಪದಕ ಪಡೆದಿದ್ದಾರೆ.

ಮಹಾರಾಷ್ಟ್ರದ ರೋಹಿಣಿ ಅವರು 40 ಕೆ.ಜಿ ವಿಭಾಗದಲ್ಲಿ ಮತ್ತು  ಮಣಿಪುರದ ತಬಾಬಿದೇವಿ 44 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದರು. ಹರಿಯಾಣದ ಹರೀಶ್ ಅವರು ಬಾಲಕರ 50 ಕೆ.ಜಿ. ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry