ಪರದಂಡ ತಂಡಕ್ಕೆ ಜಯ

7

ಪರದಂಡ ತಂಡಕ್ಕೆ ಜಯ

Published:
Updated:

ಮಡಿಕೇರಿ: ಬೊವ್ವೇರಿಯಂಡ ತಂಡವು ನಾಪೋಕ್ಲು ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಕುಲ್ಲೇಟಿರ ಹಾಕಿ ಉತ್ಸವ’ದಲ್ಲಿ ಶುಕ್ರವಾರ ಪಟ್ಟಡ ತಂಡವನ್ನು 2–1 ಅಂತರದಲ್ಲಿ ಸೋಲಿಸಿತು.

ಬೊವ್ವೇರಿಯಂಡ ಪರ ಸಚಿನ್ ಮುತ್ತಣ್ಣ, ಜೀತನ್ ಕಾಳಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಪಟ್ಟಡ ಪರ ಶರತ್ 1 ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಕಲಿಯಂಡ ತಂಡದ ವಿರುದ್ಧ ಪರದಂಡವು (2–0) ಜಯ ಗಳಿಸಿತು. ಪರದಂಡ ಪರ ಕವನ್ ಬೋಪಣ್ಣ 2 ಗೋಲು ದಾಖಲಿಸಿದರು.

ಮುಕ್ಕಾಟಿರ ತಂಡವು ಕಾಂಡಂಡ ತಂಡವನ್ನು 1–0 ಅಂತರದಲ್ಲಿ ಮಣಿಸಿತು. ಮಾಚಂಡ ತಂಡವು ಕರ್ತಮಾಡ ತಂಡವನ್ನು 1–0 ಅಂತರದಲ್ಲಿ ಸೋಲಿಸಿತು. ಮಾಚಂಡ ತಂಡದ ಪರ ಪ್ರಿನ್ಸ್ 1 ಗೋಲು ದಾಖಲಿಸಿದರು. ಮೂಕೋಂಡದ ವಿರುದ್ಧ ಕಡೇಮಾಡ ತಂಡವು ಗೆದ್ದಿತು. ಕಡೇಮಾಡ ಪರ ಪವನ್ ಬೋಪಣ್ಣ 1 ಗೋಲು ಹೊಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry