ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನಕ್ಕೆ ಪರ್ಯಾಯ 12 ದಾಖಲೆ

Last Updated 11 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಈ ಕೆಳಗಿನ ಯಾವುದಾದರೂ ಒಂದನ್ನು ಎಪಿಕ್ ಕಾರ್ಡ್‌ ಬದಲಿಗೆ ಬಳಸಬಹುದು:

* ಪಾಸ್‌ಪೋರ್ಟ್‌

*ಡ್ರೈವಿಂಗ್‌ ಲೈಸೆನ್ಸ್‌

* ಕೇಂದ್ರ, ರಾಜ್ಯ, ಅರೆ ಸರ್ಕಾರಿ, ಸಾರ್ವಜನಿಕ ಉದ್ದಿಮೆಗಳು ಸಿಬ್ಬಂದಿಗೆ ನೀಡುವ ಗುರುತಿನ ಚೀಟಿ

* ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ ಪಾಸ್‌ (ಫೋಟೊ ಇರಬೇಕು) ಪುಸ್ತಕ.

* ಪಿಎಎನ್‌ (ಪ್ಯಾನ್) ಕಾರ್ಡ್‌

* ಎಂ ನರೇಗಾ ಜಾಬ್‌ ಕಾರ್ಡ್‌

* ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌

* ಫೋಟೊವುಳ್ಳ ಪಿಂಚಣಿ ದಾಖಲೆ

* ಚುನಾವಣಾ ಆಯೋಗ ನೀಡುವ ದೃಢೀಕೃತ ಫೋಟೊ ವೋಟರ್ ಸ್ಲಿಪ್ಸ್

*ಎನ್‌ಪಿಆರ್‌ ಅಡಿ ಆರ್‌ಜಿಐ ನೀಡಿರುವ ಸ್ಮಾರ್ಟ್‌ ಕಾರ್ಡ್‌

* ಸಂಸದರು, ವಿಧಾನಸಭಾ, ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ

* ಆಧಾರ್ ಕಾರ್ಡ್

ಮತದಾನ ಸ್ನೇಹಿ ಆ್ಯಪ್‌ ‘ಚುನಾವಣಾ’

ಮತದಾನ ಸ್ನೇಹಿ ಆ್ಯಪ್‌ Chunavana:  ಮತದಾನ ಮಾಡಲು ಮತಗಟ್ಟೆ ಎಲ್ಲಿದೆ, ಅಲ್ಲಿಗೆ ತಲುಪಬೇಕಾದ ರಸ್ತೆ ಯಾವುದು, ಕಣದಲ್ಲಿರುವ ಅಭ್ಯರ್ಥಿಗಳು ಯಾರಿದ್ದಾರೆ, ಅವರು ಪ್ರತಿನಿಧಿಸುವ ಪಕ್ಷಗಳು ಯಾವುವು...  ಹೀಗೆ ಮತದಾರನಿಗೆ ಅಗತ್ಯವಿರುವ ಎಲ್ಲ ಮಾಹಿತಿಗಳ ಬಗ್ಗೆ ‘ಚುನಾವಣಾ’ ಆ್ಯಂಡ್ರಾಯ್ಡ್ ಆ್ಯಪ್‌ ಮಾರ್ಗದರ್ಶನ ನೀಡುತ್ತದೆ.

ಮತದಾನ, ಅಭ್ಯರ್ಥಿಗಳು, ಮತಗಟ್ಟೆಗೆ ಸಂಬಂಧಿಸಿದ ಎಲ್ಲ ಸಂದೇಹಗಳಿಗೂ ಇದರಲ್ಲಿ ಪರಿಹಾರವಿದೆ. ಇದಕ್ಕಾಗಿ ಎಪಿಕ್‌ ಸಂಖ್ಯೆಯನ್ನು ಬಳಸಿ ಸಂಪೂರ್ಣ ಮಾಹಿತಿ ಪಡೆಯಬಹುದು. ಅಲ್ಲದೆ, ಅಂಗವಿಕಲರಿಗೆ ಗಾಲಿ ಕುರ್ಚಿಯನ್ನೂ ಬುಕ್‌ ಮಾಡಬಹುದು. ಮತದಾನದ ಸರತಿಯಲ್ಲಿ ಎಷ್ಟು ಜನ ಇದ್ದಾರೆ, ಮತಗಟ್ಟೆಯಲ್ಲಿ ಏನೆಲ್ಲ ಸೌಲಭ್ಯಗಳಿವೆ ಎಂಬ ಮಾಹಿತಿ ಕ್ಷಣ ಮಾತ್ರದಲ್ಲಿ ಪಡೆಯಬಹುದು. ಗೂಗಲ್‌ ಪ್ಲೇ ಮೂಲಕ (Chunavana KSRSAC KGIS) ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT