ಅಪಘಾತ: ವೈದ್ಯಕೀಯ ವಿದ್ಯಾರ್ಥಿಗಳಿಬ್ಬರ ಸಾವು

7

ಅಪಘಾತ: ವೈದ್ಯಕೀಯ ವಿದ್ಯಾರ್ಥಿಗಳಿಬ್ಬರ ಸಾವು

Published:
Updated:

ವಿಜಯಪುರ: ಮಹಾರಾಷ್ಟ್ರದ ಅಕ್ಲುಜ್ ಬಳಿ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಜಯಪುರದ ಅಲ್‌ ಅಮೀನ್‌ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಬೆಂಗಳೂರು ಬಳಿಯ ಹೊಸಕೋಟೆಯ ರಾಕೇಶ್‌ (23), ಮುಂಬೈನ ಮಹಾದೇವ ಪ್ರಸಾದ್‌ (23) ಮೃತಪಟ್ಟವರು. ಸಿಂದಗಿಯ ಸಿದ್ದಾರ್ಥ ಮಜಗಿ, ಸಚಿನ್, ವಿನುತ್‌ ಗಾಯಗೊಂಡಿದ್ದಾರೆ.

ಐವರೂ ವಿದ್ಯಾರ್ಥಿಗಳು, ಸೊಲ್ಲಾಪುರ ಸಮೀಪದ ಅಕ್ಲುಜ್‌ ನಲ್ಲಿರುವ ಜಲಪಾತ ವೀಕ್ಷಿಸಲು ಕಾರಿನಲ್ಲಿ ತೆರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಗುದ್ದಿ ಅಪಘಾತವಾಗಿದೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry