ಚುನಾವಣೆಗೆ ಬಸ್: ಪ್ರಯಾಣಿಕರ ಪರದಾಟ

7

ಚುನಾವಣೆಗೆ ಬಸ್: ಪ್ರಯಾಣಿಕರ ಪರದಾಟ

Published:
Updated:

ಶಿರಾ: ಚುನಾವಣೆ ಕಾರ್ಯಕ್ಕೆ ಹೆಚ್ಚಿನ ಬಸ್‌ಗಳನ್ನು ತೆಗೆದುಕೊಂಡ ಕಾರಣ ಬಸ್‌ಗಳಿಲ್ಲದೆ ಜನರು ಸಮಸ್ಯೆ ಎದುರಿಸುವಂತಾಯಿತು. ಬಸ್‌ ಮೇಲೆ ಹತ್ತಿ ತಾವು ಸೇರಬೇಕಾದ ಸ್ಥಳವನ್ನು ಸೇರಲು ಪ್ರಯಾಣಿಕರು ಹರಸಾಹಸ ಮಾಡಿದರು.

ಬೆಂಗಳೂರು ಸೇರಿದಂತೆ ವಿವಿಧ ಕಡೆ ಉದ್ಯೋಗದಲ್ಲಿರುವವರು ವಿಧಾನಸಭೆ ಚುನಾವಣೆ ಕಾರಣ ಮತದಾನ ಮಾಡಲು ತಮ್ಮ ಗ್ರಾಮಗಳಿಗೆ ತೆರಳಲು ಬಂದಿದ್ದ ಜನರಿಗೆ ಬಸ್‌ಗಳಿಲ್ಲದೆ ತೊಂದರೆ ಅನುಭವಿಸಿದರು.

ದ್ವಿಚಕ್ರ ವಾಹನಗಳಲ್ಲಿ ಮೂರು ಮಂದಿ ಕುಳಿತು ತಮ್ಮ ಊರುಗಳಿಗೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಮಕ್ಕಳನ್ನು ಕರೆದುಕೊಂಡು ಬಂದಿದ್ದವರ ಸ್ಥಿತಿ ಕೇಳುವವರು ಇಲ್ಲದಂತಾಗಿತ್ತು.

ಟಾಪ್‌ ಪ್ರಾಯಾಣ: ಖಾಸಗಿ ಬಸ್‌ಗಳ ಒಳಗೆ ಕಾಲಿಡಲು ಜಾಗವಿಲ್ಲದೆ ಕೆಲವರು ಬಸ್‌ಟಾಪ್‌ ಮೇಲೆ ಕುಳಿತು ಪ್ರಯಾಣ ಮಾಡಿದರು.

ಸಹಕರಿಸಲು ಸಾರ್ವಜನಿಕರಲ್ಲಿ ಮನವಿ

ಶಿರಾ ಡಿಪೊದಲ್ಲಿ 80 ಬಸ್‌ಗಳಿದ್ದು, ಅದರಲ್ಲಿ 65 ಬಸ್‌ಗಳನ್ನು ಚುನಾವಣೆಗೆ ತೆಗೆದುಕೊಳ್ಳಲಾಗಿದೆ. ಶಿರಾ ಕ್ಷೇತ್ರಕ್ಕೆ 5, ಹೊಸದುರ್ಗ ಕ್ಷೇತ್ರಕ್ಕೆ 5, ಹೊಳಲ್ಕೆರೆ ಕ್ಷೇತ್ರಕ್ಕೆ 8 ಹಾಗೂ ಹಿರಿಯೂರು ಕ್ಷೇತ್ರಕ್ಕೆ 50 ಬಸ್‌ಗಳನ್ನು ಕಳುಹಿಸಿಕೊಡಲಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಿದೆ. ಜನರು ಸಹಕರಿಸಬೇಕು ಎಂದು ಶಿರಾ ಡಿಪೊ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ಮರಳುಸಿದ್ದಯ್ಯ ಮನವಿ ಮಾಡಿದರು.

**

ಬಸ್‌ಗಳಿಲ್ಲದೆ ಜನರು ಪರಡಾದುವಂತಾಗಿದೆ. ಮತದಾನ ಮಾಡಲು ಬೆಂಗಳೂರಿನಿಂದ ಕಷ್ಟ ಪಟ್ಟು ಬಂದಿದ್ದೇವೆ. ಏನೇ ಆಗಲಿ ಮತದಾನ ಮಾಡುತ್ತೇವೆ

– ಕಾಂತರಾಜು, ಪಟ್ಟನಾಯಕನಹಳ್ಳಿ

**

ಬಸ್‌ಗಳಿಲ್ಲದಿರುವುದರಿಂದ ಊರುಗಳಿಗೆ ಬರಲು ಕಷ್ಟವಾಗುತ್ತಿದೆ. ಸರ್ಕಾರ ಈ ಬಗ್ಗೆ ಸಹ ಅಗತ್ಯ ಕ್ರಮ ತೆಗೆದುಕೊಂಡರೆ ಮತದಾನದ ಪ್ರಮಾಣ ಹೆಚ್ಚಾಗುವುದು

–ಮಂಜುನಾಥ್, ಶಿರಾ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry