ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: 261 ಮತಗಟ್ಟೆಗೆ 1,305 ಸಿಬ್ಬಂದಿ ನೇಮಕ

Last Updated 12 ಮೇ 2018, 7:14 IST
ಅಕ್ಷರ ಗಾತ್ರ

ಶಹಾಪುರ: ಮತಕ್ಷೇತ್ರದಲ್ಲಿ 261 ಮತಗಟ್ಟೆ ಕೇಂದ್ರಗಳಿವೆ. ಅದರಲ್ಲಿ 30 ಅತಿ ಸೂಕ್ಷ್ಮ, 45 ಸೂಕ್ಷ್ಮ ಕೇಂದ್ರಗಳು ಸೇರಿವೆ. ಕ್ಷೇತ್ರದಲ್ಲಿ ಒಟ್ಟು 2,20458 ಮತದಾರರು ಇದ್ದು ಅದರಲ್ಲಿ 1,10,565 ಪುರುಷ, 1,09,867 ಮಹಿಳೆ ಹಾಗೂ 26 ಇತರೆ ಮತದಾರರು ಇದ್ದಾರೆ.

ಪ್ರತಿ ಮತ ಕೇಂದ್ರಕ್ಕೆ ಐವರು ಸಿಬ್ಬಂದಿ ನಿಯೋಜಿಸಿದ್ದು ಒಟ್ಟು 1,305 ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೆ. 54 ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಇಟ್ಟುಕೊಳ್ಳಲಾಗಿದೆ. ಆಯಾ ಮತಕೇಂದ್ರದಲ್ಲಿ ಕುಡಿಯುವ ನೀರು ಹಾಗೂ ಇನ್ನಿತರ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಸಹಾಯಕ ಚುನಾವಣೆ ಅಧಿಕಾರಿ ಸುಬ್ಬಣ್ಣ ಜಮಖಂಡಿ ತಿಳಿಸಿದರು.

ಶಾಂತಿ ಹಾಗೂ ಸುವ್ಯವಸ್ಥೆಯಿಂದ ಮತದಾನ ನಡೆಸಲು ಕ್ಷೇತ್ರದಲ್ಲಿ ಒಬ್ಬರು ಡಿವೈಎಸ್ಪಿ, ನಾಲ್ವರು ಸಿಪಿಐ, 9 ಜನ ಪಿಎಸ್‌ಐ, 16 ಎಎಸ್‌ಐ, 38 ಹೆಡ್ ಕಾನ್‌ಸ್ಟೆಬಲ್, 147 ಕಾನ್‌ಸ್ಟೆಬಲ್ ಹಾಗೂ 95 ಹೋಂಗಾರ್ಡ್ ನೇಮಿಸಿದೆ. ಅಲ್ಲದೆ 2 ಪ್ಯಾರಾ ತುಕಡಿ, ಒಂದು ಕೆಎಸ್ಆರ್‌ಪಿ, 2 ಡಿ.ಆರ್ ವ್ಯಾನ್ ಬಳಸಿಕೊಳ್ಳಲಾಗಿದೆ ಎಂದು ಶಹಾಪುರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಜೆ.ನಾಗರಾಜ ತಿಳಿಸಿದರು.

698 ಹೆಚ್ಚು:

ಕ್ಷೇತ್ರದಲ್ಲಿ ಮಹಿಳಾ ಮತದಾರರಗಿಂತ 698 ಪುರುಷ ಮತದಾರರು ಹೆಚ್ಚಾಗಿದ್ದಾರೆ. ಅಲ್ಲದೆ 26 ಇತರೆ ಮತದಾರರು ಇದ್ದಾರೆ. ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವುದಕ್ಕಾಗಿ ಕಡ್ಡಾಯ ಮತದಾನದ ಜಾಗೃತಿ ಅಭಿಯಾನ, ಬೀದಿ ನಾಟಕ, ರಂಗೋಲಿ ಸ್ಪರ್ಧೆ ಹೀಗೆ ಹಲವಾರು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಹಾಯಕ ಚುನಾವಣೆ ಅಧಿಕಾರಿ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT