ಪ್ರಯಾಣಿಕರಿಗೂ ತಟ್ಟಿದ ಚುನಾವಣಾ ಬಿಸಿ

7
ಬಸ್‌ ನಿಲ್ದಾಣಗಳಲ್ಲಿ ಕಾದು ಕುಳಿತು ಹೈರಾಣಾದ ಪ್ರಯಾಣಿಕರು

ಪ್ರಯಾಣಿಕರಿಗೂ ತಟ್ಟಿದ ಚುನಾವಣಾ ಬಿಸಿ

Published:
Updated:

ಚಿತ್ರದುರ್ಗ: ವಿವಿಧ ಊರುಗಳಿಗೆ ಹೋಗಲು ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರಿಗೂ ಚುನಾವಣಾ ಕಾವು ತಟ್ಟಿದ್ದು, ಅನೇಕರು ನಿಲ್ದಾಣದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಪರದಾಡುವಂತಾಯಿತು.

ಮೇ 12ರ ಮತದಾನದ ಕಾರಣ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳಿಗೆ ಕರ್ತವ್ಯಕ್ಕಾಗಿ ಕೆಎಸ್‌ಆರ್‌ಟಿಸಿ ಚಿತ್ರದುರ್ಗ ವಿಭಾಗೀಯ ಕಚೇರಿಯಿಂದ 85 ಬಸ್‌ಗಳನ್ನು ಹಾಗೂ ಖಾಸಗಿ ಬಸ್‌ಗಳನ್ನು ಹೆಚ್ಚಾಗಿ ಬಳಸಿಕೊಂಡಿರುವುದು ಇದಕ್ಕೆ ಕಾರಣ.

ಡಿಪೊದಲ್ಲಿರುವ 113 ಬಸ್‌ಗಳಲ್ಲಿ 85 ಬಸ್‌ಗಳನ್ನು ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಅಧಿಕಾರಿ, ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕರೆದುಕೊಂಡು ಹೋಗಿ, ಮತದಾನದ ನಂತರ ಪುನಃ ಕರೆತರುವ ಕಾರಣ ಶುಕ್ರವಾರ ಚಿತ್ರದುರ್ಗದಿಂದ ಹೊರ ಊರುಗಳಿಗೆ ಹೋಗುವ ಪ್ರಯಾಣಿಕರು ಬಸ್‌ ನಿಲ್ದಾಣಗಳಲ್ಲಿ ಬಸ್‌ಗಾಗಿ ಕಾದು ಕಾದು ಹೈರಾಣಾದರು. ದಾವಣಗೆರೆ ರಸ್ತೆಯಲ್ಲಿರುವ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕೇವಲ ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ನಿಂತಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry