ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ, ಆಕಾಶ ಮತ್ತು ಅಂತರಿಕ್ಷ

Last Updated 12 ಮೇ 2018, 19:30 IST
ಅಕ್ಷರ ಗಾತ್ರ

1. ನಮ್ಮ ಧರೆಯನ್ನು ಆವರಿಸಿರುವ ವಾಯುಮಂಡಲದಲ್ಲಿ (ಚಿತ್ರ - 1) ಮೋಡ, ಮಿಂಚು, ಮಳೆ, ಮಂಜು, ಹಿಮಪಾತ ಇತ್ಯಾದಿ ಎಲ್ಲ ವಿದ್ಯಮಾನಗಳೂ ಅದರ ಒಂದು ನಿರ್ದಿಷ್ಟ ಪದರದಲ್ಲೇ ಮೈದಳೆಯುತ್ತವೆ - ಹೌದಲ್ಲ? ಭೂ ವಾಯುಮಂಡಲದ ಆ ವಿಶಿಷ್ಟ ಪದರ ಯಾವುದು?

ಅ. ಸ್ತರಗೋಳ
ಬ. ಅಯಾನು ಗೋಳ
ಕ. ಹವಾಗೋಳ
ಡ. ಮಧ್ಯಗೋಳ
ಇ. ಬಹಿರ್ಗೋಳ

2. ಚಿತ್ರ -2ರಲ್ಲಿರುವ ಭೂ ಚಿತ್ರವನ್ನು ಗಮನಿಸಿ. ಈ ದೃಶ್ಯದಲ್ಲಿ -

ಅ. ಯಾವ ಯಾವ ಭೂ ಖಂಡಗಳು ಸಂಪೂರ್ಣ ಗೋಚರ?
ಬ. ಯಾವ ಯಾವ ಭೂ ಖಂಡಗಳು ಭಾಗಶಃ ಗೋಚರ?
ಕ. ಯಾವ ಯಾವ ಭೂ ಖಂಡಗಳು ಅಗೋಚರ?

3. ನಮ್ಮ ಸೂರ್ಯನ ಸುತ್ತಲಿನ ಒಂದು ಅತಿ ವಿಶಿಷ್ಟ ಪ್ರದೇಶ ‘ಎಕೋಸ್ಫಿಯರ್’ನಲ್ಲಿ ನಮ್ಮ ಭೂ ಗ್ರಹ ಮಾತ್ರವೇ ನೆಲೆಗೊಂಡಿರುವುದನ್ನು ತೋರಿಸುತ್ತಿರುವ ಚಿತ್ರ ಇಲ್ಲಿದೆ (ಚಿತ್ರ-2). ಸೌರವ್ಯೂಹದಲ್ಲಿ ಈ ಪ್ರದೇಶದ ಅತ್ಯಂತ ವಿಶಿಷ್ಟ ಗುಣ ಇವುಗಳಲ್ಲಿ ಯಾವುದು?

ಅ. ಸೂರ್ಯನ ಕನಿಷ್ಠ ಸೆಳೆತ
ಬ. ಗರಿಷ್ಠ ತೇವಾಂಶದ ಅಸ್ತಿತ್ವ
ಕ. ಹಿತಕರ ಮಟ್ಟದ ಬೆಳಕು
ಡ. ಜೀವಿ ವಿಹಿತ ಉಷ್ಣತೆ

4. ಅತ್ಯಂತ ಪರಿಚಿತ, ಪ್ರಬಲ ಹವಾ ವಿದ್ಯಮಾನವೊಂದಕ್ಕೆ ಸಂಬಂಧಿಸಿದ ವಿಶಿಷ್ಟ ಸ್ವರೂಪದ ಮೇಘ ರಾಶಿಯೊಂದು ಚಿತ್ರ-4ರಲ್ಲಿದೆ. ಇದನ್ನು ಗುರುತಿಸಬಲ್ಲಿರಾ?

ಅ. ಮಳೆ ಮೋಡ ಕ್ಯುಮುಲೋ ನಿಂಬಸ್
ಬ. ಸುಂಟರ ಗಾಳಿ →ಕ. ಜೆಟ್ ಸ್ಟ್ರೀಂ
ಡ. ಸೈಕ್ಲೋನ್

5. ಹಿಮಲೋಕಗಳಿಂದ ಕಳಚಿ ಕಡಲಿಗೆ ಬಿದ್ದು ತೇಲುತ್ತ, ಸಾಗುತ್ತ, ನಿಧಾನವಾಗಿ ಕರಗಿ ಕಣ್ಮರೆಯಾಗುವ ಒಂದು ಬೃಹತ್ ‘ಐಸ್ ಬರ್ಗ್’ ದೃಶ್ಯ ಚಿತ್ರ -5ರಲ್ಲಿದೆ. ಭೂಮಿಯ ಯಾವ ಸಾಗರದಲ್ಲಿ ಐಸ್ ಬರ್ಗ್‌ಗಳು ಅತ್ಯಂತ ಹೆಚ್ಚು?

ಅ. ದಕ್ಷಿಣ ಪೆಸಿಫಿಕ್ ಸಾಗರ
ಬ. ಉತ್ತರ ಅಟ್ಲಾಂಟಿಕ್ ಸಾಗರ
ಕ. ದಕ್ಷಿಣ ಮಹಾ ಸಾಗರ
ಡ. ಆರ್ಕ್ಟಿಕ್ ಸಾಗರ
ಇ. ಹಿಂದೂ ಮಹಾಸಾಗರ

6. ಮನುಷ್ಯರ ಬಹುವಿಧ ದುರಾಕ್ರಮಣಗಳಿಂದಾಗಿ ದಿನೇ ದಿನೇ ಕ್ಷೀಣಿಸುತ್ತಿರುವ ಧರೆಯ ಅತ್ಯಮೂಲ್ಯ ನಿಧಿಯಾದ ‘ವೃಷ್ಟಿವನ’ದ ದುಃಸ್ಥಿತಿಯ ಒಂದು ದೃಶ್ಯ ಚಿತ್ರ-6ರಲ್ಲಿದೆ. ಪ್ರಸ್ತುತ ಉಳಿದಿರುವ ಒಟ್ಟು ವೃಷ್ಟಿವನ ಧರೆಯ ಇಡೀ ಭೂ ಪ್ರದೇಶದ ಶೇಕಡ ಎಷ್ಟಿದೆ? ಅದು ಇವುಗಳಲ್ಲಿ ಯಾವುದಕ್ಕೆ ಅತ್ಯಂತ ಸಮೀಪ?

ಅ. 8%; ಬ. 15%; ಕ. 33%; ಡ. 50%

7. ಭೂ ತೊಗಟೆಯ ಕೆಳಗಿನ ‘ಕವಚ’ದಲ್ಲಿ ಶಿಲಾಪಾಕ ತುಂಬಿರುವುದು ನಿಮಗೂ ಗೊತ್ತಲ್ಲ? ಭಾರೀ ಬಿಸಿಯ ಈ ಶಿಲಾಪಾಕ ಭೂ ನೆಲದ ಕೆಲವು ಪ್ರದೇಶಗಳಲ್ಲಿ ನೇರವಾಗಿಯೇ ಗೋಚರಿಸುತ್ತದೆ (ಚಿತ್ರ-7). ಕವಚದಲ್ಲಿರುವ ಶಿಲಾಪಾಕದ ಸರಾಸರಿ ತಾಪ ಇವುಗಳಲ್ಲಿ ಯಾವುದಕ್ಕೆ ಸಮೀಪ?

ಅ. 8000 ಸೆಲ್ಸಿಯಸ್
ಬ. 1,3000 ಸೆಲ್ಸಿಯಸ್  
ಕ. 2,8000 ಸೆಲ್ಸಿಯಸ್
ಡ. 5,0000 ಸೆಲ್ಸಿಯಸ್

8. ಅಂತರಿಕ್ಷದಲ್ಲಿ ಹೊಸ ಹೊಸ ನಕ್ಷತ್ರಗಳ ಜನನದ ನೆಲೆಯೊಂದರ ದೃಶ್ಯ ಚಿತ್ರ -8ರಲ್ಲಿದೆ. ಇಂಥ ನೆಲೆಗಳ ಹೆಸರೇನು?

ಅ. ಗ್ಯಾಲಕ್ಸಿ 
ಬ. ನೀಹಾರಿಕೆ
ಕ. ಸೂಪರ್ ನೋವಾ ಅವಶೇಷ
ಡ. ನಕ್ಷತ್ರ ಪುಂಜ

9. ನಕ್ಷತ್ರದ ಬಣ್ಣಗಳು ಭಿನ್ನ ಭಿನ್ನ: ‘ಕೆಂಪು, ಹಳದಿ, ನೀಲಿ... ಇತ್ಯಾದಿ’ (ಚಿತ್ರ-9ರಲ್ಲಿ ನೋಡಿ). ತಾರೆಗಳ ಬಣ್ಣಗಳು ಅವುಗಳ ಯಾವ ಗುಣವನ್ನು ಸೂಚಿಸುತ್ತವೆ?

ಅ. ಗಾತ್ರ
ಬ. ದ್ರವ್ಯರಾಶಿ
ಕ. ಮೇಲ್ಮೈ ಉಷ್ಣತೆ
ಡ. ನಮ್ಮಿಂದ ಇರುವ ದೂರ

10. ನಮ್ಮ ಸೌರವ್ಯೂಹದ ಅತ್ಯಂತ ಪ್ರಸಿದ್ಧ ‘ಕುಬ್ಜ ಗ್ರಹ’ ಪ್ಲೂಟೋ ಚಿತ್ರ-10ರಲ್ಲಿದೆ. ಸೌರವ್ಯೂಹದ ಯಾವ ‘ಪ್ರದೇಶ’ದಲ್ಲಿ ಈ ಕುಬ್ಜ ಗ್ರಹ ನೆಲೆಗೊಂಡಿದೆ?

ಅ. ಕ್ಷುದ್ರಗ್ರಹ ಪಟ್ಟಿ
ಬ. ಕ್ವುಯಿಪರ್ ಪಟ್ಟಿ
ಕ. ಊರ್ಟ್ ಮೋಡ
ಡ. ಟ್ರಾನ್ಸ್ ನೆಪ್ಚೂನಿಯನ್ ಪ್ರದೇಶ

11. ಭೂಮಿಗೆ ಗೋಚರಿಸುವ ‘ಗ್ರಹಣ’ಗಳ ಇಬ್ಬಗೆಯ ದೃಶ್ಯಗಳು ಚಿತ್ರ - 11 ಮತ್ತು ಚಿತ್ರ - 12ರಲ್ಲಿವೆ. ಈ ಗ್ರಹಣಗಳು ಯಾವುವೆಂಬುದನ್ನು ಈ ಪಟ್ಟಿಯಲ್ಲಿ ಗುರುತಿಸಬಲ್ಲಿರಾ?

ಅ. ಪಾರ್ಶ್ವ ಚಂದ್ರಗ್ರಹಣ
ಬ. ಸಂಪೂರ್ಣ ಚಂದ್ರಗ್ರಹಣ
ಕ. ಪಾರ್ಶ್ವ ಸೂರ್ಯಗ್ರಹಣ
ಡ. ಕಂಕಣ ಗ್ರಹಣ
ಇ. ಸಂಪೂರ್ಣ ಸೂರ್ಯಗ್ರಹಣ

12. ಹತ್ತಾರು ಸಾವಿರ ತಾರೆಗಳು ಗುಂಪುಗೂಡಿ ಒಂದೇ ತಾರೆಯಂತೆ ಗೋಚರಿಸುವ ದೃಶ್ಯ ಚಿತ್ರ -13ರಲ್ಲಿದೆ. ವಿಶ್ವದ ಇಂಥ ವಿಶಿಷ್ಟ ನಿರ್ಮಿತಿಗಳ ಹೆಸರೇನು?

ಅ. ನಕ್ಷತ್ರ ರಾಶಿ
ಬ. ನಕ್ಷತ್ರ ಪುಂಜ
ಕ. ನಕ್ಷತ್ರ ಗುಚ್ಛ
ಡ. ಗೋಳೀಯ ಗುಚ್ಛ

13. ಭೂಮಿಗೆ ಗೋಚರಿಸುವಂತೆ ಗ್ರಹವೊಂದು ಸೂರ್ಯನ ವದನಕ್ಕೆ ಅಡ್ಡನಾಗಿ ಸಾಗುವ ಖಗೋಳ ವಿದ್ಯಮಾನವಾದ ‘ಗ್ರಹ ಸಂಕ್ರಮಣ’ದ ಒಂದು ಚಿತ್ರ ಸರಣಿ ಇಲ್ಲಿದೆ (ಚಿತ್ರ-14). ಈ ಕೆಳಗಿನ ಪಟ್ಟಿಯಲ್ಲಿ ಹೆಸರಿಸಿರುವ ಯಾವ ಯಾವ ಗ್ರಹ ಸಂಕ್ರಮಣಗಳನ್ನು ಭೂಮಿಯಿಂದ ಕಾಣುವುದು ಸಾಧ್ಯವಿಲ್ಲ? ಅದಕ್ಕೆ ವೈಜ್ಞಾನಿಕ ಕಾರಣ ಏನು?

ಅ. ಬುಧ ಸಂಕ್ರಮಣ
ಬ. ಶುಕ್ರ ಸಂಕ್ರಮಣ
ಕ. ಮಂಗಳ ಸಂಕ್ರಮಣ  
ಡ. ಗುರು ಸಂಕ್ರಮಣ
ಇ. ಶನಿ ಸಂಕ್ರಮಣ

14. ಹೋಲಿಕೆ ಪೂರ್ಣಗೊಳಿಸಿ:

ಅ. ‘ಮೌನ ಕೀಯಾ’ ಪರ್ವತ ಭೂಮಿಯಲ್ಲಿದೆ; ‘ಒಲಿಂಪಸ್ ಮಾನ್ಸ್’ ಪರ್ವತ ಎಲ್ಲಿದೆ?
ಬ. ‘ಟೈಟಾನ್’ ಶನಿಗ್ರಹದ ಒಂದು ಚಂದ್ರ; ‘ಟ್ರೈಟಾನ್’ ಯಾವ ಗ್ರಹದ ಚಂದ್ರ?
ಕ. ‘ಬೀಟಲ್ ಗೀಸ್’ ಒಂದು ನಕ್ಷತ್ರ; ‘ದೇವರ ಕಣ್ಣು’ ಅದೆಂಥ ಕಾಯ?
ಡ. ‘ಭೂ ಗುರುತ್ವ 1 ಎಂದಾದರೆ ಚಂದ್ರನ ಗುರುತ್ವ?
ಇ. ಭೂಮಿಯ ವಯಸ್ಸು 4.5 ಶತಕೋಟಿ ವರ್ಷ; ವಿಶ್ವದ ವಯಸ್ಸು?

ಉತ್ತರಗಳು

1. ಕ. ಹವಾಗೋಳ
2. ಅ. ಯೂರೋಪ್  ಬ. ಉತ್ತರ ಅಮೆರಿಕ, ಆಫ್ರಿಕಾ ಮತ್ತು ಏಷ್ಯಾ, ಕ. ದಕ್ಷಿಣ ಅಮೆರಿಕ, ಅಂಟಾರ್ಕ್ಟಿಕಾ ಮತ್ತು ಆಸ್ಟ್ರೇಲಿಯಾ
3. ಡ. ಜೀವಿ ವಿಹಿತ ಉಷ್ಣತೆ
4. ಡ. ಸೈಕ್ಲೋನ್
5. ಬ. ಉತ್ತರ ಅಟ್ಲಾಂಟಿಕ್ ಸಾಗರ
6. ಅ. ಶೇಕಡ 8 ಭಾಗ
7. ಬ. 1,300 ಡಿಗ್ರಿ ಸೆಲ್ಸಿಯಸ್
8. ಬ. ನಿಹಾರಿಕೆ  
9. ಕ. ಮೇಲ್ಮೈ ಉಷ್ಣತೆ
10. ಬ. ಕ್ವುಯಿಪರ್ ಪಟ್ಟಿ
11. ಚಿತ್ರ -11: ಡ, ಚಿತ್ರ -12: ಇ
12. ಡ. ಗೋಳೀಯ ಗುಚ್ಛ
13. ಕ, ಡ ಮತ್ತು ಇ.ಏಕೆಂದರೆ ಈ ಗ್ರಹಗಳ ಸೌರ ಪರಿಭ್ರಮಣ ಪಥಗಳು ಭೂ ಪಥದ ಹೊರಕ್ಕಿವೆ
14. ಅ. ಮಂಗಳ ಗ್ರಹ  ಬ. ನೆಪ್ಚೂನ್, ಕ. ಗ್ರಹೀಯ ನೀಹಾರಿಕೆ ಡ. 1/6, ಇ. 14 ಶತಕೋಟಿ ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT