ಮತ ಚಲಾಯಿಸಿದ ದೃಶ್ಯ ಮೊಬೈಲ್‌ನಲ್ಲಿ ಪ್ರಸಾರ; ಪ್ರಕರಣ ದಾಖಲು​

7

ಮತ ಚಲಾಯಿಸಿದ ದೃಶ್ಯ ಮೊಬೈಲ್‌ನಲ್ಲಿ ಪ್ರಸಾರ; ಪ್ರಕರಣ ದಾಖಲು​

Published:
Updated:
ಮತ ಚಲಾಯಿಸಿದ ದೃಶ್ಯ ಮೊಬೈಲ್‌ನಲ್ಲಿ ಪ್ರಸಾರ; ಪ್ರಕರಣ ದಾಖಲು​

ಬೆಳಗಾವಿ: ಮತ ಚಲಾಯಿಸುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡಿದ ಅನಾಮಧೇಯ ವ್ಯಕ್ತಿಯ ವಿರುದ್ಧ ಬೆಳಗಾವಿ ಉತ್ತರ ಕ್ಷೇತ್ರದ ಚುನಾವಣಾಧಿಕಾರಿ ಪಿ.ಎನ್‌. ಲೋಕೇಶ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

1951ರ ಪ್ರಜಾಪ್ರತಿನಿಧಿ ಕಾಯ್ದೆಯ ಕಲಂ 128ರ ಅಡಿ ಮತದಾನವು ರಹಸ್ಯ ಪ್ರಕ್ರಿಯೆಯಾಗಿದ್ದು, ಮತದಾನದ ರಹಸ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಿಯಮವನ್ನು ಉಲ್ಲಂಘಿಸಿ ಮತದಾನವನ್ನು ಬಹಿರಂಗಗೊಳಿಸಲಾಗಿದೆ ಎಂದು ಅವರು ಪ್ರಕರಣ ದಾಖಲಿಸಿದ್ದಾರೆ.

‘ವಿಡಿಯೊ ಚಿತ್ರೀಕರಣವನ್ನು ಯಾರು ಮಾಡಿದ್ದಾರೆಂದು ಸದ್ಯಕ್ಕೆ ಗೊತ್ತಾಗಿಲ್ಲ. ಯಾವ ಮತಕೇಂದ್ರದಲ್ಲಿ ನಡೆದಿರುವುದು ಎನ್ನುವುದು ಕೂಡ ತಿಳಿದುಬಂದಿಲ್ಲ. ಬೆಳಗಾವಿ ಉತ್ತರ ಕ್ಷೇತ್ರದ ಮತಪತ್ರವನ್ನು ವಿಡಿಯೊದಲ್ಲಿ ತೋರಿಸಲಾಗಿದೆ. ಹೀಗಾಗಿ ಇದು ನಮ್ಮ ಕ್ಷೇತ್ರದಲ್ಲಿ ನಡೆದಿರುವಂತಹದ್ದು ಎನ್ನುವುದು ಖಾತರಿಯಾಗಿದೆ’ ಎಂದು ಪಿ.ಎನ್‌.ಲೋಕೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry