‘ನಾವೇನು ರೇಪ್‌ ಮಾಡಿ ಅನ್ತೀವೇನ್ರೀ..?’

7

‘ನಾವೇನು ರೇಪ್‌ ಮಾಡಿ ಅನ್ತೀವೇನ್ರೀ..?’

Published:
Updated:

ವಿಜಯಪುರ: ‘ನಾವ್‌ ಹೋದೆಡೆ ಯುವಕರು ತಮ್ಮ ಮೊಬೈಲ್‌ಗಳಲ್ಲಿ ಸೆಲ್ಫಿ ತೆಗೆದ್‌ಕೊಳ್ತಾರೆ. ಆ ಫೋಟೋಗಳನ್ನ ತಮ್ಮ ಫೇಸ್‌ಬುಕ್‌ನಲ್ಲಿ ಹಾಕ್ಕೋಳ್ತಾರೆ. ಅಷ್ಟಕ್ಕೆ ಅವರು ನಮ್ಮ ಅಭಿಮಾನಿಗಳಲ್ಲ, ಕಾರ್ಯಕರ್ತರು ಅಲ್ಲಾ, ಬೆಂಬಲಿಗರಂತೂ ಅಲ್ಲವೇ ಅಲ್ಲಾ. ಅವರಿಗೇನು ನಾವು ರೇಪ್‌ ಮಾಡಿ ಅಂತ ಹೇಳ್ತೀವೇನ್ರೀ..?’

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಗುರುವಾರ ವಿಜಯಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮನ್ನು ಪ್ರಶ್ನಿಸಿದ ಪತ್ರಕರ್ತರಿಗೆ ಮರು ಪ್ರಶ್ನಿಸಿದ ಪರಿಯಿದು.

‘ಗುಜರಾತ್‌ನ ಶಾಸಕ ಜಿಗ್ನೇಶ್‌ ಮೇವಾನಿ, ವಿಜಯಪುರದಲ್ಲಿ 2017ರ ಡಿಸೆಂಬರ್‌ ಅಂತ್ಯದಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನಿಮ್ಮ ಬೆಂಬಲಿಗರೇ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ದೂರಿದ್ದಾರಲ್ಲಾ’ ಎಂಬ ಪತ್ರಕರ್ತರ ಪ್ರಶ್ನೆಗೆ ಯತ್ನಾಳ ಮೇಲಿನಂತೆ ಉತ್ತರಿಸುತ್ತಿದ್ದಂತೆ, ಆವಕ್ಕಾಗುವ ಸರದಿ ವರದಿಗಾರರದ್ದಾಗಿತ್ತು.

‘ನೋಡ್ರೀ ಈಚೆಗಂತೂ ಕೆಲ ಲೆಟರ್‌ಪ್ಯಾಡ್‌ ಲೀಡರ್‌ಗಳ ಹೇಳಿಕೆಯೇ ಎಲ್ಲೆಡೆ ಹೆಚ್ಚಾಗೈತಿ. ಇಂತಹ ಹೇಳಿಕೆಗೆ ಯಾರೂ ಕಿಮ್ಮತ್ತು ನೀಡಬಾರ್ದು ಕರ್ಣೀ. ಹಿಂಗ ಮಾತಾಡೋರೋ ಇನ್ನೆಂತವ್ರೀ..’ ಎಂದು ತಮ್ಮದೇ ಶೈಲಿಯಲ್ಲಿ ಯತ್ನಾಳ ವ್ಯಂಗ್ಯವಾಗಿಯೇ ತಮ್ಮನ್ನು ಟೀಕಿಸಿದವರ ಕಾಲೆಳೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry