ಸೋಮವಾರ, ಮಾರ್ಚ್ 8, 2021
19 °C

ರಾಹುಲ್‌ ಪ್ರಧಾನಿ ಆಗಬಹುದು: ಶತ್ರುಘ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಹುಲ್‌ ಪ್ರಧಾನಿ ಆಗಬಹುದು: ಶತ್ರುಘ್ನ

ಪಟ್ನಾ: ‘ಯಾರು ಬೇಕಾದರೂ ದೇಶದ ಪ್ರಧಾನಿ ಆಗಬಹುದು. ರಾಹುಲ್‌ ಗಾಂಧಿ ಜನಸಾಮಾನ್ಯರಲ್ಲಿ ಪ್ರಸಿದ್ಧರಾಗಿದ್ದಾರೆ’ ಎಂದು ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

ಪ್ರಧಾನಿಯಾಗಲು ಸಿದ್ಧ ಎಂದು ರಾಹುಲ್ ಗಾಂಧಿ ಹೇಳಿಕೆಗೆ ನರೇಂದ್ರ ಮೋದಿ ಅವರು ಟೀಕೆ ವ್ಯಕ್ತಪಡಿಸಿದ್ದನ್ನು ಸಿನ್ಹಾ ಈ ಮೂಲಕ ಪ್ರಶ್ನಿಸಿದ್ದಾರೆ.

‘ಕಳೆದ ಕೆಲವು ವರ್ಷಗಳಲ್ಲಿ ರಾಹುಲ್ ಪ್ರಬುದ್ಧರಾಗಿದ್ದು, ಜನಸಾಮಾನ್ಯರಲ್ಲಿ ಖ್ಯಾತರಾಗಿದ್ದಾರೆ. ಅತಿ ದೊಡ್ಡ, ಹಳೆಯದಾದ ರಾಷ್ಟ್ರೀಯ ಪಕ್ಷದ ನಾಯಕರಾಗಿರುವ ರಾಹುಲ್ ಪ್ರಧಾನಿಯಾಗುವ ಸಾಧ್ಯತೆ ವ್ಯಕ್ತಪಡಿಸಿದರೆ ಅದರಲ್ಲಿ ತಪ್ಪೇನು’ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರು ಕೇಳಿರುವ ಸಮಂಜಸವಾದ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಮೋದಿ ಅವರು ‘ಗಮನ ಬೇರೆಡೆ ಸೆಳೆಯುವ ರಾಜಕೀಯದಲ್ಲಿ’ ತೊಡಗಿದ್ದಾರೆ ಎಂದು ಸಿನ್ಹಾ ಆರೋಪಿಸಿದ್ದಾರೆ.

‘ಪ್ರಸಿದ್ಧಿ ಇರುವವರು (ನಾಮ್‌ದಾರ್‌), ಕೆಲಸ ಮಾಡುವವರು(ಕಾಮ್‌ದಾರ್), ಸಾಮರ್ಥ್ಯ ಇರುವವರು (ದಮ್‌ದಾರ್) ಹಾಗೂ ವಿವೇಕ ಇರುವ (ಸಮಜ್‌ದಾರ್) ಯಾರಾದರೂ ಸಂಖ್ಯಾಬಲ ಹಾಗೂ ಬೆಂಬಲ ಹೊಂದಿದ್ದರೆ ದೇಶದ ಪ್ರಧಾನಿ ಆಗಬಹುದು’ ಎಂದು ಸಿನ್ಹಾ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.