ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನರಾ ಬ್ಯಾಂಕ್‌ಗೆ ₹ 4,859 ಕೋಟಿ ನಷ್ಟ

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಕೃತ ಕೆನರಾ ಬ್ಯಾಂಕ್‌ 2017–18ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ₹ 4,859 ಕೋಟಿ ನಷ್ಟ ಅನುಭವಿಸಿದೆ.

2016–17ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 214 ಕೋಟಿ ನಿವ್ವಳ ಲಾಭ ಗಳಿಸಿತ್ತು.

ಬ್ಯಾಂಕ್‌ನ ವಸೂಲಿಯಾಗದ ಸಾಲದ ಪ್ರಮಾಣ (ಎನ್‌ಪಿಎ) ₹ 2,924 ಕೋಟಿಯಿಂದ ₹ 8,762 ಕೋಟಿಗೆ ಭಾರಿ ಏರಿಕೆ ಕಂಡಿದೆ. ಇದರಿಂದಾಗಿ ನಷ್ಟ ಅನುಭವಿಸುವಂತಾಗಿದೆ. ತ್ರೈಮಾಸಿಕದಲ್ಲಿ ವರಮಾನ ₹ 12,889 ಕೋಟಿಯಿಂದ ₹ 11,555 ಕೋಟಿಗೆ ಇಳಿಕೆ ಕಂಡಿದೆ.

ವಾರ್ಷಿಕ ಸಾಧನೆ:  2017–18ನೇ ಹಣಕಾಸು ವರ್ಷಕ್ಕೆ ನಷ್ಟದ ಪ್ರಮಾಣ ₹ 4,222 ಕೋಟಿಗೆ ತಲುಪಿದೆ. ಅದಕ್ಕೂ ಹಿಂದಿನ ಹಣಕಾಸು ವರ್ಷದಲ್ಲಿ
₹ 1,121 ಕೋಟಿ ಲಾಭ ಗಳಿಸಿತ್ತು.

ಹಣಕಾಸು ವರ್ಷಕ್ಕೆ ವರಮಾನ ₹ ₹8,942 ಕೋಟಿಯಿಂದ ₹ 48,194 ಕೋಟಿಗೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT