ದೂರಸಂಪರ್ಕ ವರಮಾನ ಇಳಿಕೆ

7

ದೂರಸಂಪರ್ಕ ವರಮಾನ ಇಳಿಕೆ

Published:
Updated:

ನವದೆಹಲಿ: ದೂರಸಂಪರ್ಕ ವಲಯದ ಸರಾಸರಿ ವರಮಾನವು 2017ರಲ್ಲಿ ಶೇ 8.56ಕ್ಕೆ ಇಳಿಕೆಯಾಗಿದ್ದು ₹ 2.55 ಲಕ್ಷ ಕೋಟಿಗೆ ತಲುಪಿದೆ.

2016ರಲ್ಲಿ ವರಮಾನ ₹ 2.79 ಲಕ್ಷ ಕೋಟಿ ಇತ್ತು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಮಾಹಿತಿ ನೀಡಿದೆ.

ಪರವಾನಗಿ ಶುಲ್ಕ ಮತ್ತು ತರಂಗಾಂತರ ಬಳಕೆ ಶುಲ್ಕ ಸಂಗ್ರಹದಲ್ಲಿ ಇಳಿಕೆ ಆಗಿರುವುದರಿಂದ ವರಮಾನದಲ್ಲಿ ಇಳಿಕೆ ಕಂಡುಬಂದಿದೆ.

ಹೆಚ್ಚಿದ ಚಂದಾದಾರರ ಸಂಖ್ಯೆ: ದೂರವಾಣಿ ಚಂದಾದಾರರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದರೂ ವರಮಾನದಲ್ಲಿ ಇಳಿಕೆಯಾಗಿದೆ.

2016ರ ಡಿಸೆಂಬರ್‌ ಅಂತ್ಯಕ್ಕೆ 115 ಕೋಟಿ ಇದ್ದ ಚಂದಾದಾರರ ಸಂಖ್ಯೆ 2017ರ ಡಿಸೆಂಬರ್‌ ಅಂತ್ಯದಲ್ಲಿ 119 ಕೋಟಿಗೆ ಏರಿಕೆಯಾಗಿದೆ. ವಾರ್ಷಿಕ ಶೇ 3.38ರಷ್ಟು ಪ್ರಗತಿ ಕಂಡುಬಂದಿದೆ ಎಂದು ‘ಟ್ರಾಯ್‌’ ವರದಿ ನೀಡಿದೆ.

ಕಂಪನಿಗಳು ತರಂಗಾಂತರ ಬಳಸಿಕೊಂಡಿರುವುದಕ್ಕೆ ನೀಡುವ ಶುಲ್ಕವು 2016 ರಲ್ಲಿ ₹ 7,574 ಕೋಟಿ ಇತ್ತು. 2017ರಲ್ಲಿ ₹ 5,089 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry